ಬದಿಯಡ್ಕ: ರಸ್ತೆ ಕಾಮಗಾರಿಯ ಮರೆಯಲ್ಲಿ ವಿದ್ಯುತ್ ಮೊಟಕು ನಿತ್ಯ ಘಟನೆಯಾಗಿದೆ ಎಂಬ ದೂರುಂಟಾಗಿದೆ. ಕುಂಬಳೆ- ಮುಳ್ಳೇರಿಯ ರಸ್ತೆ ಕಾಮಗಾರಿಯ ಅಂಗವಾಗಿ ನಿರಂತರ ವಿದ್ಯುತ್ ವಿತರಣೆಯನ್ನು ಆಡಚಣೆಯುಂಟಾಗು ತ್ತಿದೆಯೆಂದೂ, ಇದರಿಂದ ಕುಡಿಯುವ ನೀರು ಕ್ಷಾಮ ತೀವ್ರಗೊಂಡಿದೆಯೆಂದು ದೂರಲಾಗಿದೆ. ವಿದ್ಯುತ್ ಮೊಟಕುಗೊಂಡ ಬಗ್ಗೆ ದೂರು ನೀಡಲೆಂದು ನಿರಂತರ ಫೋನ್ ಮಾಡಿದರೂ ಕರೆ ಸ್ವೀಕರಿಸಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ವೆಂದೂ ನಾಗರಿಕರು ಹೇಳುತ್ತಿದ್ದಾರೆ.
ವಿದ್ಯುತ್ ಕಂಬಗಳು ರಸ್ತೆಗೆ ಹೊಂದಿಕೊಂಡು ಸ್ಥಾಪಿಸುವ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂದಾಗಿ ವಿದ್ಯುತ್ ಮಂಡಳಿಗೆ ಭಾರೀ ಖರ್ಚು ತಗಲುತ್ತಿದ್ದು, ಇದರ ಜತೆಗೆ ಜನರಿಗೆ ಭಾರೀ ಸಂಕಷ್ಟವುಂಟಾಗುತ್ತಿದೆಯೆಂದೂ ದೂರಲಾಗಿದೆ.