ತಿರುವನಂತಪುರ: ಆಟಿಂಗಲ್‌ನಲ್ಲಿ ಪಿಂಕ್ ಪೊಲೀಸ್ ಅಧಿಕಾರಿಯೋರ್ವೆ ಬಾಲಕಿಯೊಂ ದಿಗೆ ಅನುಚಿತವಾಗಿ ವರ್ತಿಸಿದ ಘಟನೆಗೆ ಸಂಬಧಿಸಿ ನಷ್ಟಪರಿಹಾರ ನೀಡಬೇಕೆಂಬ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ ತೀರ್ಪಿನ ವಿರುದ್ಧ ಸರಕಾರ ಸಲ್ಲಿಸಿದ ಅಪೀಲನ್ನು ನ್ಯಾಯಾಲಯ ಇಂದು ಪರಿಗಣಿಸಲಿದೆ. ಜಸ್ಟೀಸ್‌ಗಳವರಾದ ಪಿ.ಬಿ. ಸುರೇಶ್ ಕುಮಾರ್, ಪಿ.ಎಸ್. ಸುಧಾ ಎಂಬಿವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯನ್ನು ಪರಿಗಣಿಸಲಿದೆ. ಪೊಲೀಸ್ ಅಧಿಕಾರಿ ಬಾಲಕಿಯೊಂ ದಿಗೆ ಕೆಟ್ಟ ಪದ ಬಳಸಿಲ್ಲ. ಪೊಲೀಸ್ ಅಧಿಕಾರಿಯ ವೈಯಕ್ತಿತ ಲೋಪಗಳಿಗೆ ನಷ್ಟಪರಿಹಾರ ನೀಡಲು ಸರಕಾರಕ್ಕೆ ಬಾಧ್ಯತೆ ಇಲ್ಲವೆಂದೂ ಸರಕಾರ ಅಪೀಲಿನಲ್ಲಿ ತಿಳಿಸಿದೆ.