ಕಟ್ಟತ್ತಡ್ಕ: ಸಹೋದರಿಗೆ ಪತಿ ಮನೆಯವರು ಹಲ್ಲೆಗೈಯ್ಯುತ್ತಿದ್ದಾರೆಂಬ ದೂರಿನ ಮೇರೆಗೆ ಆಬಗ್ಗೆ ವಿಚಾರಿಸಲು ತೆರಳಿದ ಸಹೋದರನಿಗೆ ಯುವತಿಯ ಪತಿ ಹಾಗೂ ಪತಿಯ ಸಹೋದರ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.
ಕಾಸರಗೋಡು ಕೊರಕ್ಕೋಡಿನ ಶರೀಫ್ (೨೮) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶರೀಫರ ಸಹೋದರಿ ಶಂಸೀನಳ ಪತಿ ಕಟ್ಟತ್ತಡ್ಕ ಎ.ಕೆ.ಜಿ ನಗರದ ಸಹೀಲ್, ಈತನ ಸಹೋದರ ಸಕೀರ್, ಇವರ ತಾಯಿ ಎಂಬಿವರು ಸೇರಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಇವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.