ನವಕೇರಳ ಸಭೆ: ಯುಡಿಎಫ್, ಲೀಗ್‌ನಲ್ಲಿ ಗೊಂದಲ

ಕಾಸರಗೋಡು: ನವಕೇರಳ ಸಭೆ  ಕಾಸರ ಗೋಡು ಜಿಲ್ಲೆಯ ಪರ್ಯಟನೆ ಪೂರ್ತಿ ಗೊಳಿಸಿದ ಬೆನ್ನಲ್ಲೇ ರಾಜ್ಯ ರಾಜಕೀಯ  ಗೊಂದಲದಲ್ಲಿ ಸಿಲುಕಿಕೊಂಡಿದೆ.  ಐಕ್ಯರಂ ಗದ ಘಟಕ ಪಕ್ಷಗಳಾದ  ಕಾಂಗ್ರೆಸ್, ಮುಸ್ಲಿಂಲೀಗ್‌ನಲ್ಲಿ ಆತಂಕ ತೀವ್ರಗೊಂಡಿರುತ್ತದೆ. ಸಿಪಿಐ ಕಾರ್ಯಕರ್ತರಲ್ಲ್ಲೂ ಗೊಂದಲ ಸೃಷ್ಟಿಯಾಗಿರುವುದಾಗಿ ಸೂಚನೆಯಿದೆ.

ಕೊನೆಯದಾಗಿ ನವಕೇರಳ ಸಭೆಯಲ್ಲಿ ಲೀಗ್ ನೇತಾರ  ಭಾಗವಹಿಸಿರುವುದೇ ಯುಡಿಎಫ್ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ. ನವಕೇರಳ ಸಭೆಯ ಅಂಗವಾಗಿ ನಿನ್ನೆ ಬೆಳಿಗ್ಗೆ ಕಾಸರಗೋಡು ಗೆಸ್ಟ್ ಹೌಸ್‌ನಲ್ಲಿ ನಡೆದ  ಬೆಳಗ್ಗಿನ ಚರ್ಚೆಯಲ್ಲಿ ಮುಸ್ಲಿಂ ಲೀಗ್ ನೇತಾರನೂ, ಲೀಗ್ ರಾಜ್ಯ ಕೌನ್ಸಿಲ್ ಸದಸ್ಯನೂ, ಉದ್ಯಮಿಯೂ ಆಗಿರುವ ಎನ್.ಎ. ಅಬೂಬಕ್ಕರ್ ಭಾಗವಹಿಸಿದ್ದರು. ಚರ್ಚೆಯಲ್ಲಿ ಭಾಗವಹಿಸಿದ ೨೮ ಮಂದಿ ಅತಿಥಿಗಳಲ್ಲಿ ಎನ್.ಎ. ಅಬೂಬಕ್ಕರ್ ಕೂಡಾ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನ ನಿಲುವುಗಳಿಗೆ ಸಂಬಂಧಿಸಿ ಲೀಗ್ ನೇತಾರರ ಕುರಿತು ಇತ್ತೀಚೆಗೆ ಮುಸ್ಲಿಂ ಲೀಗ್‌ನ ನಾಯಕತ್ವದಲ್ಲಿ  ತೀವ್ರ ಅಭಿಪ್ರಾಯವ್ಯತ್ಯಾಸ ಉಂಟಾಗಿರುವುದಾಗಿ ವರದಿಯಾಗಿದೆ.  ಸಮಸ್ತ ವಿವಾದ ಹಾಗೂ ಪ್ಯಾಲೆಸ್ತೀನ್ ಸಮಸ್ಯೆಗೆ ಸಂಬಂಧಿಸಿ ಇ.ಟಿ. ಮುಹಮ್ಮದ್ ಬಷೀರ್, ಎಂ.ಕೆ. ಮುನೀರ್ ಎಂಬಿವರ ಅಭಿಪ್ರಾಯಗಳು ಕಾರ್ಯಕರ್ತರಲ್ಲೂ, ಯುಡಿಎಫ್‌ನಲ್ಲೂ ಗೊಂದಲಕ್ಕೆ ಕಾರಣವಾಗಿತ್ತು.  ಇದರಿಂದ ರಾಜ್ಯ ನಾಯಕತ್ವಕ್ಕೆ ಈ ವಿಷಯದಲ್ಲಿ  ಮಧ್ಯ ಪ್ರವೇಶಿಸಬೇಕಾಗಿ ಬಂದಿತ್ತು. ಸಿಪಿಎಂ  ಪ್ಯಾಲೆಸ್ತೀನ್‌ಗೆ ಬೆಂಬಲ  ಸೂಚಿಸಿ ನಡೆಸಿದ ಸಮ್ಮೇಳನಕ್ಕೆ ಸಿಪಿಎಂ ಆಹ್ವಾನಿಸಿದರೆ ಭಾಗವಹಿಸುವುದಾಗಿ ಸಂಸದ ಇ.ಟಿ. ಮುಹಮ್ಮದ್ ಬಷೀರ್ ಹೇಳಿದ್ದರು. ಬಷೀರ್‌ರ ಹೇಳಿಕೆಯನ್ನು  ಸ್ವಾಗತಿಸಿದ ಸಿಪಿಎಂ ನಾಯಕತ್ವ  ಲೀಗ್‌ನ್ನು ಸಮ್ಮೇಳನದಲ್ಲಿ ಭಾಗವಹಿಸಲು  ಅಧಿಕೃತವಾಗಿ ಆಹ್ವಾನಿಸಿದೆ. ಇದು ಯುಡಿಎಫ್ ನಾಯಕತ್ವದಲ್ಲೂ ಕಾಂಗ್ರೆಸ್‌ನಲ್ಲೂ ವಿವಾದ ಹಾಗೂ  ವಾಗ್ವಾದಕ್ಕೂ ಎಡೆಯಾಗಿತ್ತು. ಸಿಪಿಎಂನ ಆಹ್ವಾನಕ್ಕೆ ಕೃತಜ್ಞತೆ ತಿಳಿಸಿ ಪಿ.ಕೆ. ಕುಂಞಾಲಿಕುಟ್ಟಿ  ವಿವಾದವನ್ನು ತಣ್ಣಗಾಗಿಸಿದ್ದರು. ಈಮಧ್ಯೆ ಮುಸ್ಲಿಂ ಲೀಗ್ ಮಲಪ್ಪುರಂ ಜಿಲ್ಲಾ ಕಮಿಟಿಯ ಮೌನ ಸಮ್ಮತಿಯೊಂದಿಗೆ ಲೀಗ್ ಜಿಲ್ಲಾ ಸೆಕ್ರೆಟರಿಯನ್ನು ಕೇರಳ ಬ್ಯಾಂಕ್ ಡೈರೆಕ್ಟರ್ ಸ್ಥಾನಕ್ಕೆ ಸಿಪಿಎಂ ನಾಮನಿರ್ದೇಶ ಮಾಡಿದೆ.  ಈ ತೀರ್ಮಾನ ಮುಸ್ಲಿಂ ಲೀಗ್‌ನಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸಿದೆ. ಇದರ ಹೆಸರಲ್ಲಿ ಮಲಪ್ಪುರದಲ್ಲಿ  ಪ್ರತಿಭಟನಾ ಬ್ಯಾನರ್‌ಗಳು  ಪ್ರತ್ಯಕ್ಷಗೊಂಡಿವೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯ ಲೀಗ್‌ನೇತಾರನೂ, ಉದ್ಯಮಿಯೂ ಆದ ಎನ್.ಎ. ಅಬೂಬಕ್ಕರ್ ಮುಖ್ಯಮಂತ್ರಿ ನಡೆಸಿದ ಬೆಳಗ್ಗಿನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.  ಇದೇ ವೇಳೆ  ಲೀಗ್ ರಾಜ್ಯ ನೇತಾರ  ಕೆ.ಪಿ.ಎ. ಮಜೀದ್ ಸಿಪಿಎಂ ವಿರುದ್ಧ ತೀವ್ರ ನಿಲುವುಗಳೊಂದಿಗೆ ರಂಗಕ್ಕಿಳಿದಿದ್ದಾರೆ.  ಮರಣವರೆಗೆ  ಮಾರ್ಕ್ಸಿಸ್ಟ್ ಪಕ್ಷದೊಂದಿಗೆ ಸಹಕರಿಸಲಾರೆನೆಂದು ೧೯೭೪ರಲ್ಲಿ ಅಂದಿನ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಪಿಎಂಎಸ್‌ಎ  ಪೂಕೋಯ ತಂಙಳ್ ತಿಳಿಸಿದ್ದರು. ಆ ಹೇಳಿಕೆಯಲ್ಲ್ಲಿ  ತಿದ್ದುಪಡಿಮಾಡಬೇಕಾದ ಯಾವುದೇ ಪರಿಸ್ಥಿತಿ ಈಗಿಲ್ಲ ಎಂದಿದ್ದರು.ಇದೇ ವೇಳೆ  ಮುಖ್ಯಮಂತ್ರಿ ನಡೆಸಿದ ಚರ್ಚೆಯಲ್ಲಿ ತಾನು ಭಾಗವಹಿಸಿರುವುದು ನಾಡಿನ ಸಮಸ್ಯೆಗಳನ್ನು ವಿವರಿಸಲಾಗಿದೆಯೆಂದು  ಎನ್.ಎ. ಅಬೂಬಕ್ಕರ್  ಒಂದು ಪತ್ರಿಕೆಯೊಂ ದಿಗೆ ತಿಳಿಸಿದ್ದಾರೆ. ಯುಡಿಎಫ್ ನಾಯಕತ್ವ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ತನಗೆ ತಿಳಿದಿಲ್ಲವೆಂದೂ ಅವರು ತಿಳಿಸಿದ್ದಾರೆ. ಯುಡಿಎಫ್ ನಾಯಕತ್ವ ಬಹಿಷ್ಕರಿಸಿದ ಕಾರ್ಯಕ್ರಮದಲ್ಲಿ ಮುಸ್ಲಿಂ ಲೀಗ್  ರಾಜ್ಯ ಕೌನ್ಸಿಲ್ ಸದಸ್ಯ ಭಾಗವಹಿಸಿರುವುದು  ಸರಿಯಲ್ಲವೆಂದೂ, ಅವರೊಂದಿಗೆ ಸ್ಪಷ್ಟೀಕರಣ ಕೇಳುವುದಾಗಿ ಲೀಗ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಪತ್ರಕರ್ತರೊಂದಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page