ತಿರುವನಂತಪುರ: ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರ ವೇತನ ಹೆಚ್ಚಿಸಲು ನಿರ್ಧರಿಸಲಾಗಿದೆ. ಪ್ರತಿ ಕೆಲಸಕ್ಕೆ ೨೦ ರೂಪಾಯಿಗಳ ಹೆಚ್ಚಳ ಮಾಡಲಾಗಿದೆ. ಇದರಿಂದ ಇನ್ನು ಮುಂದೆ ವೇತನ ೩೧೧ ರೂ.ಗೇರಲಿದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಹೊರಡಿಸಿದ ವಿಜ್ಞಾಪನೆಯಲ್ಲಿ ರಾಜ್ಯಗಳಲ್ಲಿ ವೇತನ ಹೆಚ್ಚಳ ಕುರಿತು ತಿಳಿಸಲಾಗಿದೆ. ಕೇರಳ, ಹರಿಯಾಣ, ಗೋವಾ ಸಹಿತ ೧೦ ರಾಜ್ಯಗಳಲ್ಲಿ ವೇತನ ಹೆಚ್ಚಳ ಜ್ಯಾರಿಗೆ ಬರಲಿದೆ.