ಕಾಸರಗೋಡು: ತಮಿಳುನಾಡಿನ ದಿಂಡಿಗಲ್‌ನಲ್ಲಿ ಬೃಹತ್ ಪ್ರಮಾಣದ ಗಾಂಜಾವನ್ನು ಕೇರಳ ಅಬಕಾರಿ ಇಲಾಖೆ ಪತ್ತೆ ಹಚ್ಚಿ ವಶಪಡಿಸಿ ಕೊಂಡಿದೆ. ಲಾರಿಯಲ್ಲಿ ಸಾಗಿಸಲಾಗು ತ್ತಿದ್ದ ೨೨೫ ಕಿಲೋ ಗಾಂಜಾ ಸಹಿತ ಇಬ್ಬರನ್ನು ಕೇರಳ ಅಬಕಾರಿ ದಳ ವಶಕ್ಕೆ ಪಡೆದುಕೊಂಡಿದೆ. ಆಂಧ್ರ ಪ್ರದೇಶದಿಂದ ಈ ಗಾಂಜಾವನ್ನು ತಮಿಳುನಾಡು ಮೂಲಕ ಸಾಗಿಸಲಾಗುತ್ತಿತ್ತು. ವಶಕ್ಕೆ ಪಡೆದುಕೊಳ್ಳಲಾದ ಗಾಂಜಾ, ಲಾರಿ ಸಹಿತ ಬಂಧಿತರಿಬ್ಬರನ್ನೂ ತಮಿಳುನಾಡಿನ ಡಿಂಡಿಗಲ್ ಪೊಲೀಸರಿಗೆ ಕೇರಳ ಅಬಕಾರಿ ದಳದವರು ಹಸ್ತಾಂತರಿಸಿದ್ದಾರೆ.