ಮಂಜೇರಿಯಲ್ಲಿ ನಗರಸಭಾ ಸದಸ್ಯನಿಗೆ ಇರಿತ

0
251

ಮಲಪ್ಪುರಂ: ನಗರಸಭಾ ಸದಸ್ಯನನ್ನು ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ. ಮಂಜೇರಿ ನಗರಸಭಾ ಸದಸ್ಯ ಅಬ್ದುಲ್ ಜಲೀಲ್ ಎಂಬವರಿಗೆ ಇರಿಯಲಾಗಿದೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಪಯ್ಯಿನಾಡ್ ಎಂಬಲ್ಲಿ ಘಟನೆ ನಡೆದಿದೆ.

ವಾಹನ ನಿಲುಗಡೆ ವಿಷಯಕ್ಕೆ ಸಂಬಂಧಿಸಿದ ತರ್ಕ ಘಟನೆಗೆ ಕಾರಣವೆನ್ನಲಾಗಿದೆ. ಇರಿತದಿಂದ ಗಂಭೀರ ಗಾಯಗೊಂಡ ಇವರನ್ನು ಪೆರಿಂದಲ್‌ಮಣ್ಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೈಕ್‌ನಲ್ಲಿ ತಲುಪಿದ ಇಬ್ಬರು ಆಕ್ರಮಣ ನಡೆಸಿರುವುದಾಗಿ ತಿಳಿದುಬಂದಿದ್ದು ಅವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

NO COMMENTS

LEAVE A REPLY