ಶ್ರೀನಗರದಲ್ಲಿ ಇಬ್ಬರು ಉಗ್ರರ ಹತ್ಯೆ

0
284

ಶ್ರೀನಗರ: ಶ್ರೀನಗರ ರೈನಾವಾರಿ ವಲಯದಲ್ಲಿ ಇಬ್ಬರು ಉಗ್ರರನ್ನು ಭದ್ರತಾಪಡೆ ಹತ್ಯೆಗೈದಿದೆ. ಇಂದು ಮುಂಜಾನೆ ಸೇನೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆಮಾಡಿದೆ. ಕೊಲೆಗೀಡಾದ ಉಗ್ರರು ಯೋಧರ ಹತ್ಯೆ ಸಹಿತ ಹಲವು ಅಪರಾಧ ಕೃತ್ಯಗಳಲ್ಲಿ ಶಾಮೀಲಾದವ ರಾಗಿದ್ದಾರೆಂದು ಕಾಶ್ಮೀರದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ತಿಳಿಸಿದ್ದಾರೆ. ಕೊಲೆಗೀಡಾದ ಉಗ್ರರ ಕೈಯಲ್ಲಿದ್ದ ಬಂದೂಕು, ಮದ್ದುಗುಂಡುಗಳನ್ನು ವಶಪಡಿಸಲಾಗಿದೆ.

ಶ್ರೀನಗರದ ರೈನಾವಾರಿ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ಉಗ್ರರಿಗೆ ತಡೆಯೊಡ್ಡಿದಾಗ ಘರ್ಷಣೆ ನಡೆದಿದೆ. ಉಗ್ರರ ಪೈಕಿ ಓರ್ವ ಮಾಧ್ಯಮ ಕಾರ್ಯಕರ್ತನೆಂಬ ನಕಲಿ ಗುರುತುಚೀಟಿ ಹೊಂದಿದ್ದಾನೆನ್ನಲಾಗಿದೆ.

NO COMMENTS

LEAVE A REPLY