ಕಾಸರಗೋಡು: ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ಸವಾರಿ ಮಾಡುವವರ ಪತ್ತೆಗೆ ಅತ್ಯಾಧುನಿಕ ವ್ಯವಸ್ಥೆಯ ಎ.ಐ. ಕ್ಯಾಮರಾಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ. ರಾಜ್ಯದಲ್ಲಿ ಸ್ಥಾಪಿಸಲಾಗುವ ೭೦೦ ಕ್ಯಾಮರಾಗಳ ಪೈಕಿ ೬೬೭ ಕ್ಯಾಮರಾಗಳನ್ನೂ ಅಳವಡಿಸ ಲಾಯಿತು. ಎಲ್ಲಾ ಜಿಲ್ಲೆಗಳಲ್ಲಿ ಇದರ ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿ ಸಲಾಗಿದೆ. ಮೋಟಾರು ವಾಹನ ಇಲಾ ಖೆಯ ನಿಯಂತ್ರಣದಲ್ಲಿ ಕೆಲ್ಟ್ರೋನ್ ಈ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಎಪ್ರಿಲ್‌ನಲ್ಲಿ ಇದರ ಉದ್ಘಾಟನೆ ಯನ್ನು ನೆರವೇರಿಸಲಾಗುವುದು.
ಕಾಸರಗೋಡು ಜಿಲ್ಲೆಯಲ್ಲಿ ೪೪ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಇವುಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಈಗ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಈ ಕ್ಯಾಮರಾ ಅಳವಡಿಸುವುದಕ್ಕೆ ಹಿನ್ನಡೆಯಾಗಿದೆ. ಕಾಸರಗೋಡು- ಕಣ್ಣೂರು ಜಿಲ್ಲೆಗಳಲ್ಲಿ ಅಳವಡಿಸಲಾದ ಕ್ಯಾಮರಾಗಳನ್ನು ತೆರವುಗೊಳಿಸಲಾಗು ತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ೪೪ ಕ್ಯಾಮರಾಗಳನ್ನು ತೆರವುಗೊಳಿಸಲಾಗಿದೆ. ಈ ಕ್ಯಾಮರಾಗಳಲ್ಲಿ ರಾತ್ರಿ ವೇಳೆಗಳಲ್ಲಿಯೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳನ್ನು ಸೆರೆ ಹಿಡಿಯಬಹುದಾಗಿದೆ.