ತಿರುವನಂತಪುರ: ಲೋಕಾಯುಕ್ತ ಆರ್ಡಿನೆನ್ಸ್ ನವೀಕರಿಸಲು ಸಚಿವ ಸಂಪುಟ ಸಭೆಯಲ್ಲಿ ಸರಕಾರ ತೀರ್ಮಾನಿಸಿದೆ. ಅದೇ ರೀತಿ ರಾಜ್ಯದಲ್ಲಿ ಹೊಸ ಮದ್ಯ ನೀತಿಗೆ ಸಭೆ ಅಂಗೀಕಾರ ನೀಡಿದೆ. ಇದೇ ವೇಳೆ ಲೋಕಾಯುಕ್ತ ಆರ್ಡಿನೆನ್ಸ್ ನವೀಕರಣೆಗೆ ಸಿಪಿಐ ವಿರೋಧ ವ್ಯಕ್ತ ಪಡಿಸಿದೆ. ಈ ಹಿಂದೆ ಲೋಕಾಯುಕ್ತ ವನ್ನು ನಿಷ್ಕ್ರಿಯಗೊಳಿಸುವ ಕುರಿತು ಸರಕಾರ ಆರ್ಡಿನೆನ್ಸ್ ಹೊರಡಿಸಿತ್ತು. ಇದರ ಕಾಲಾವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ನವೀಕರಣೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳ ಲಾಯಿತು.ಮದ್ಯ ನೀತಿಗೆ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ರಾಜ್ಯದಲ್ಲಿ ಇನ್ನಷ್ಟು ಹೆಚ್ಚು ಮದ್ಯದಂಗಡಿಗಳನ್ನು ತೆರೆಯಲು ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ಅದೇ ರೀತಿ ಪ್ರತಿ ತಿಂಗಳ ೧ರಂದು ಆಚರಿಸುತ್ತಿದ್ದ ಡ್ರೈ ಡೇ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಇನ್ನು ಮುಂದೆ ಇದೀಗಿನ ರೀತಿಯಲ್ಲೇ ೧ನೇ ದಿನಾಂಕ ಮದ್ಯ ಲಭಿಸದು. ಐಟಿ ವಲಯದಲ್ಲಿ ಬಾರ್ ರೆಸ್ಟೋ ರೆಂಟ್ಗಳನ್ನು ತೆರೆಯಲು ಸರಕಾರ ಅನುಮತಿ ನೀಡಲು ನಿರ್ಧರಿಸಿದೆ.