ಪ್ಲಸ್‌ಟು ಪರೀಕ್ಷೆ ಆರಂಭ: ಎಸ್‌ಎಸ್‌ಎಲ್‌ಸಿ ನಾಳೆಯಿಂದ

0
231

ಕಾಸರಗೋಡು: ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆಯಿಂದ ಆರಂಭಗೊಳ್ಳುವುದು. ಈ ಬಾರಿ  ಎಸ್‌ಎಸ್‌ಎಲ್‌ಸಿ-ಪ್ಲಸ್‌ಟು ಪರೀಕ್ಷೆ ಬರೆಯಲು  ಜಿಲ್ಲೆಯಿಂದ ೩೬,೮೭೬ ಮಂದಿ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಈಪೈಕಿ ೯೪೨೦ ಹೆಣ್ಮಕ್ಕಳ ಸಹಿತ ೧೯,೮೫೧ ಮಂದಿ ೧೫೬ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಪ್ಲಸ್‌ಟುಗೆ  ೧೭,೦೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಪ್ಲಸ್‌ಟು ಪರೀಕ್ಷೆಗಳು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಇಂದು ಆರಂಭಗೊಂಡಿದೆ. ನಾಳೆಯಿಂದ ಎಪ್ರಿಲ್ ೨೯ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವುದು.

ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ ೧೦,೯೯೫ ವಿದ್ಯಾರ್ಥಿಗಳಲ್ಲಿ ೫೦೬೬ ಮಂದಿ ಹೆಣ್ಮಕ್ಕಳಾಗಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದು ನಾಯಮ್ಮಾರಮೂಲೆ ಟಿಐಎಚ್‌ಎಸ್‌ಎಸ್‌ನಲ್ಲಾಗಿದೆ. ೭೯೮ ಮಂದಿ ಹೆಸರು ನೋಂದಾಯಿಸಿದ್ದಾರೆ.

NO COMMENTS

LEAVE A REPLY