ಜನವಾಸ ಕೇಂದ್ರದಲ್ಲಿ ಕಾಡುಹಂದಿ ಉಪಟಳ: ಗುಂಡಿಕ್ಕಿ ಕೊಲೆ

0
329

ಕಾಸರಗೋಡು: ಕಾಡು ಹಂದಿ ಜನವಾಸವಲಯದಲ್ಲಿ ಜನರಿಗೆ ಭೀತಿ ಸೃಷ್ಟಿಸಿದಾಗ ಅಧಿಕಾರಿಗಳು ಗುಂಡು ಹಾರಿಸಿ ಕೊಂದರು. ತಾಯೆನಾಯಮ್ಮಾರ್‌ಮೂಲೆಯಲ್ಲಿ ಹಂದಿ ಜನವಾಸ ಸ್ಥಳದಲ್ಲಿ ಬೆದರಿಕೆ ಸೃಷ್ಟಿಸಿತ್ತು. ಈ ವೇಳೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ತಲುಪಿದ ಅರಣ್ಯ- ವನ್ಯ ಜೀವಿ ಇಲಾಖೆಯ ಬಿ. ಅಬ್ದುಲ್ ಗಫೂರ್ ಗುಂಡು ಹಾರಿಸಿಕೊಂದಿದ್ದಾರೆ. ಇಲ್ಲಿನ ಸುಲೈಮಾನ್ ಎಂಬವರ ಹಿತ್ತಿಲಿನಲ್ಲಿ ಹಂದಿಗೆ ಗುಂಡು ಹಾರಿಸಲಾಗಿದೆ. ಸ್ಪೆಷಲ್ ಡ್ಯೂಟಿ ಫಾರೆಸ್ಟ್ ಆಫೀಸರ್ ಕೆ. ಬಾಬು, ಆರ್.ಆರ್.ಟಿ. ಸದಸ್ಯರಾದ ಸನಲ್, ಬಿಜಿತ್, ಬಿಬಿನ್ ಸನ್‌ಬಾಬು, ಅಭಿಲಾಷ್, ಅಮಲ್ ಎಂಬವರು ತಂಡದಲ್ಲಿದ್ದರು.

NO COMMENTS

LEAVE A REPLY