ಉಪ್ಪಳ: ಮನೆ ಪರಿಸರದ ಶೆಡ್ ಬೆಂಕಿ ತಗಲಿ ಹೊತ್ತಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೀಯಪದವು ಚರ್ಚ್ ಸಮೀಪದ ನಿವಾಸಿ ಮೊಹಮ್ಮದ್ ಎಂಬವರ ಶೆಡ್ಡ್‌ಗೆ ಬೆಂಕಿ ತಗಲಿದೆ. ಮನೆಯ ಸಮೀಪದಲ್ಲೇ ಶೀಟ್ ಹೊದಿಸಿ ಕಟ್ಟಿಗೆ ಹಾಕಿದ್ದ ಶೆಡ್ ಇದಾಗಿದ್ದು, ಇದಕ್ಕೆ ಇಂದು ಮುಂಜಾನೆ ಸುಮಾರು ೨.೩೦ರ ವೇಳೆ ಆಕಸ್ಮಾತ್ ಬೆಂಕಿ ತಗಲಿದೆ. ಕೂಡಲೇ ಮನೆಯವರ ಗಮನಕ್ಕೆ ಬಂದು ಉಪ್ಪಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದ ಅಧಿಕಾರಿ ಪ್ರಭಾಕರನ್ ನೇತೃತ್ವದಲ್ಲಿ ತೆರಳಿ ಬೆಂಕಿ ನಂದಿಸಿದ್ದಾರೆ. ಸೌದೆ, ಶೆಡ್ಡ್ ಉರಿದು ಹೋಗಿದೆ.