ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ: ಪತಿ ಸಹಿತ ನಾಲ್ವರ ವಿರುದ್ಧ ಕೇಸು

0
564

ಕುಂಬಳೆ: ಹೆಚ್ಚುವರಿ ವರ ದಕ್ಷಿಣೆಗಾಗಿ ಒತ್ತಾಯಿಸಿ ಯುವ ತಿಗೆ ಕಿರುಕುಳ ನೀಡಿದ ಆರೋ ಪದಂತೆ ಪತಿ ಸಹಿತ ನಾಲ್ಕು ಮಂದಿ ವಿರುದ್ಧ ಕುಂಬಳೆ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.

ಆರಿಕ್ಕಾಡಿ ನಿವಾಸಿ ಮೊಹಮ್ಮದ್‌ರ ಪುತ್ರಿ ಆಯಿಷತ್ ಸಫಾನರ ದೂರಿನಂತೆ ಚೆಂಗಳ ಸಂತೋಷ್‌ನಗರದ ಅಬ್ದುಲ್ ನಿಸಾರ್, ಈತನ ತಂದೆ ಅಬೂಬಕರ್ ತಾಯಿ ನಬೀಸ, ಸಹೋದರಿ ನಸೀರ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಆಯಿಷತ್ ಸಫಾನ ಹಾಗೂ ಅಬ್ದುಲ್ ನಿಸಾರ್‌ರ ವಿವಾಹ ೨೦೧೯ ಅಕ್ಟೋಬರ್ ೬ರಂದು ನಡೆದಿದೆ. ಈ ವೇಳೆ ೨೮ ಪವನ್ ಚಿನ್ನಾಭರಣ ಅಬ್ದುಲ್ ನಿಸಾರ್‌ಗೆ ನೀಡಲಾಗಿತ್ತೆನ್ನಲಾಗಿದೆ. ಇವರಿಗೆ ಒಂದೂವರೆ ವರ್ಷದ ಪುತ್ರನಿ ದ್ದಾನೆ. ಆದರೆ ಇತ್ತೀಚೆಗಿನಿಂದ ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆಂದು ದೂರಲಾಗಿದೆ.

NO COMMENTS

LEAVE A REPLY