ಕುಟುಂಬ ದೈವಕೋಲ ಕಾಣಲು ಹೋದಾಗ ಮನೆಯಿಂದ ಹಣ, ಚಿನ್ನಾಭರಣ ಕಳವು

0
7008

ಹೊಸದುರ್ಗ: ಮನೆಯವರು ದೈವಕೋಲ ಕಾಣಲು  ಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.

ಕಲ್ಲೂರಾವಿ ಪಟ್ಟಕ್ಕಲ್  ನಿವಾಸಿಯೂ ಹಾಲು ಸೊಸೈಟಿ  ನೌಕರನಾದ ವಿನೋದ್ ಎಂಬವರ ಮನೆಯಿಂದ ಕಳವು ನಡೆದಿದೆ. ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಬೆಡ್‌ರೂಂ ಪ್ರವೇಶಿಸಿದ್ದಾರೆ. ಅಲ್ಲಿನ ಕಪಾಟಿನಲ್ಲಿರಿಸಿದ್ದ ಏಳು ಪವನ್ ಚಿನ್ನಾಭರಣ ಹಾಗೂ ೧,೪೦,೦೦೦ ರೂಪಾಯಿ ಕಳವು ನಡೆಸಿರುವುದಾಗಿ ತಿಳಿದುಬಂದಿದೆ. ವಿನೋದ್ ಹಾಗೂ ಕುಟುಂಬ ನಿನ್ನೆ ರಾತ್ರಿ ೭ ಗಂಟೆ ವೇಳೆ ಪಟ್ಟಕ್ಕಾಲ್‌ನ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ದೈವಕೋಲ ಕಾಣಲು ತೆರಳಿದ್ದರು. ಮಧ್ಯರಾತ್ರಿ ವೇಳೆ ಇವರು ಮರಳಿದ್ದು, ಮನೆಯಿಂದ ನಗ-ನಗದು ಕಳವಿಗೀಡಾದ ವಿಷಯ ತಿಳಿದುಬಂದಿದೆ.  ಈ ಬಗ್ಗೆ ವಿನೋದ್ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಹಾಗೂ ಕಾಸರಗೋಡಿನಿಂದ ಬೆರಳಚ್ಚು ತಜ್ಞರು, ಶ್ವಾನದಳ ತಲುಪಿ ತಪಾಸಣೆ ನಡೆಸಿದೆ.

NO COMMENTS

LEAVE A REPLY