ಇಡುಕ್ಕಿ: ಇಲ್ಲಿಗೆ ಸಮೀಪದ ತೊಡು ಪುಳ ಪುಟ್ಟಾಡಿಯಲ್ಲಿ ಮನೆಗೆ ಬೆಂಕಿ ತಗಲಿ ದಂಪತಿ ದಾರುಣವಾಗಿ ಮೃತಪಟ್ಟರು. ವ್ಯಾಪಾರಿ ರವೀಂದ್ರನ್ (೫೦), ಪತ್ನಿ ಉಷಾ (೪೫) ಮೃತಪಟ್ಟವರು. ಗಂಭೀರ ಗಾಯ ಗೊಂಡ ಪುತ್ರಿ ಶ್ರೀಧನ್ಯಳನ್ನು ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದು ಮುಂಜಾನೆ ೧ ಗಂಟೆ ವೇಳೆ ಘಟನೆ ನಡೆದಿದೆ.
ಹಾಲಿಕ್ರಾಸ್ ಕಾಲೇಜು ಬಳಿಯಲ್ಲಿ ಇವರ ಸಣ್ಣ ಮನೆ ಇದೆ. ಮುಂಜಾನೆ ಶ್ರೀಧನ್ಯಳ ಬೊಬ್ಬೆ ಕೇಳಿದಾಗ ನೆರೆಮನೆಯವರು ತಲುಪಿದ್ದು, ಗಾಯಗೊಂಡ ಅವಳನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಈ ವೇಳೆ ರವೀಂದ್ರ ಹಾಗೂ ಉಷಾ ಮೃತಪಟ್ಟಿದ್ದರು.
ಮೃತದೇಹವನ್ನು ಇಡುಕ್ಕಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ್ಮಹತ್ಯೆ ಎಂದು ಶಂಕಿಸಲಾಗಿದೆ.