ಹೊಸದಿಲ್ಲಿ: ಪಾಕಿಸ್ತಾನದ ಬೋಟ್‌ನಲ್ಲಿ ಸಾಗಿಸುತ್ತಿದ್ದ ೨೮೦ ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಗುಜರಾತ್ ತೀರದಿಂದ ವಶಪಡಿಸಲಾಗಿದೆ. ಈ ಸಂಬಂಧ ಒಂಭತ್ತು ಮಂದಿ ಪಾಕಿಸ್ತಾನ ಪ್ರಜೆಗಳನ್ನು ಬಂಧಿಸಲಾಗಿದೆ. ಭಾರತೀಯ ಕರಾವಳಿ ಭದ್ರತಾ ಪಡೆ ಹಾಗೂ ಉಗ್ರ ನಿಗ್ರಹದಳ ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ವಶಪಡಿಸಲಾಗಿದೆ. ಇಂದು ಮುಂಜಾನೆ ವೇಳೆ ಅಲ್ ಹಾಜ್ ಎಂಬ ಪಾಕಿಸ್ತಾನ ನೋಂದಾಯಿತ ಬೋಟ್ ಗುಜರಾತ್ ತೀರದಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ.
ಕೂಡಲೇ ಕರಾವಳಿ ಭದ್ರತಾ ಪಡೆ ಹಾಗೂ ಉಗ್ರ ನಿಗ್ರಹದಳ ಕಾರ್ಯಾಚರಣೆ ನಡೆಸಿ ಬೋಟ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಳಿಕ ಬೋಟನ್ನು ಪರಿಶೀಲಿಸಿದಾಗ ಹೆರಾಯಿನ್ ಪತ್ತೆಯಾಗಿದೆ. ಬೋಟನ್ನು ದಡಕ್ಕೆ ತಲುಪಿಸಿದ್ದು, ಅದರಲ್ಲಿದ್ದ ಪಾಕ್ ಪ್ರಜೆಗಳನ್ನು ತನಿಖೆ ನಡೆಸಲಾಗುತ್ತಿದೆ.