ಮುಳಿಯಾರು ತೀಯಡ್ಕದಲ್ಲಿ ಆನೆಗಳ ಹಿಂಡು: ಸ್ಥಳೀಯರಿಗೆ ಭೀತಿ

0
376

ಮುಳಿಯಾರು: ಪಂಚಾಯತ್‌ನ ತೀಯಡ್ಕದಲ್ಲಿ ಜನವಾಸಸ್ಥಳದಲ್ಲಿ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು, ಸ್ಥಳೀಯರು ಭೀತಿಯುತರಾಗಿದ್ದಾರೆ. ೯ ಆನೆಗಳ ಹಿಂಡು ಈ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೂ ಸುಳಿದಾಡುತ್ತಿವೆ. ರಸ್ತೆ ಸಹಿತ ಕೃಷಿ ಸ್ಥಳಗಳಲ್ಲಿ ತಿರುಗಾಡುವ ಆನೆ ಹಿಂಡುಗಳು ಕೃಷಿ ಬೆಳೆ ನಾಶದೊಂದಿಗೆ ಜೀವ ಬೆದರಿಕೆಯನ್ನು ಉಂಟುಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಆರ್.ಆರ್.ಟಿ. ತಂಡ ಸ್ಥಳಕ್ಕೆ ತಲುಪಿದೆ. ಸ್ಥಳೀಯರು ಶಬ್ದ ಉಂಟುಮಾಡಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

NO COMMENTS

LEAVE A REPLY