ಜಿಲ್ಲೆಯಿಂದ ನಾಪತ್ತೆಯಾದ ೧೭ ಮಂದಿ ಐಸಿಸ್ ಕೇಂದ್ರದಲ್ಲಿ

0
781

ಕಾಸರಗೋಡು: ಜಿಲ್ಲೆಯ ಪಡನ್ನ ಮತ್ತು ತೃಕರಿಪುರ ಪ್ರದೇಶಗಳಿಂದ ನಾಪತ್ತೆಯಾದ ೧೭ ಮಂದಿ ಐಸಿಸ್ ಕೇಂದ್ರದಲ್ಲಿರುವುದಾಗಿ ತನಿಖಾ ತಂಡಕ್ಕೆ ಸ್ಪಷ್ಟ ಮಾಹಿತಿ ಲಭಿಸಿದೆ.

ನಾಪತ್ತೆಯಾದವರ ಪೈಕಿ ಕೆಲವರು ಊರಲ್ಲಿರುವ ಅವರ ಮನೆಯವರಿಗೆ ಮೊಬೈಲ್ ಮೂಲಕ ಕಳುಹಿಸಿಕೊಟ್ಟ ಧ್ವನಿ ಸಂದೇಶವನ್ನು ತನಿಖಾ ತಂಡ ಪರಿಶೀಲಿಸಿದಾಗ ಅದರಿಂದ ಈ ಮಾಹಿತಿ ಲಭಿಸಿದೆ. ನಾಪತ್ತೆಯಾದವರೆಲ್ಲರೂ ಒಂದೇ ಕೇಂದ್ರದಲ್ಲಿರುವುದಾಗಿಯೂ ಸಂದೇಶದಲ್ಲಿ ತಿಳಿಸಲಾಗಿದೆ. ಸುಳ್ಳು ಹೇಳಿ ಊರು ಬಿಟ್ಟಿರುವುದಕ್ಕೆ ತಮ್ಮನ್ನು ಕ್ಷಮಿಸಬೇಕು. ಸುಳ್ಳು ಹೇಳುವುದಕ್ಕೆ ಕೆಲವೊಂಮ್ಮೆ ಮತವೂ ಅನುಮತಿ ನೀಡುತ್ತಿದೆ.  ನಮಗೆ ನಮ್ಮದೇ ಒಂದು ಗುರಿಯಿದೆ. ಆ ಗುರಿ ಸಾಧಿಸಲು ತಾವು ಏನು ಬೇಕಾದರೂ ಮಾಡುವೆವು. ಅದು ಎಷ್ಟು ಕಠಿಣವಾದರೂ ತಮ್ಮ ತತ್ವದತ್ತ ತಾವು ಸಾಗುವೆವು. ಈ ವಿಷಯವನ್ನು ಪೊಲೀಸರಿಗೆ ತಿಳಿಸಬಾರದೆಂದೂ ಧ್ವನಿ ಸಂದೇಶದಲ್ಲಿ ತಿಳಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆ ಮತ್ತು ಕೇರಳದಿಂದ ನಾಪತ್ತೆಯಾದ ೨೧ ಮಂದಿ ಪೈಕಿ ಹಲವರನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ತನಿಖಾ ತಂಡಕ್ಕೂ ಲಭಿಸಿದೆ.

ಜಿಲ್ಲೆಯಿಂದ ನಾಪತ್ತೆಯಾದವರ ಪೈಕಿ ಅಶ್‌ಫಾಕ್ ಮಜೀದ್‌ನನ್ನು ಮುಂಬೈ ಯಿಂದ ಪೊಲೀಸರು ಪತ್ತೆಹಚ್ಚಿದ್ದರು. ಆತನ ಮತ್ತು ಮುಂಬೈಯಿಂದ ಸೆರೆಗೊಳಗಾದ ಅಲ್ಲಿನ ಇಸ್ಲಾಮಿಕ್ ರಿಸರ್ಚ್ ಫೌಂಡೇ ಶನ್‌ನ ಪಿ.ಆರ್.ಒ ಆರ್ಶಿ ಖುರೇಶಿ ಮತ್ತು ಆತನ ಸ್ನೇಹಿತ ರಿಸ್ವಾನ್ ಖಾನ್ ಸೇರಿ ನಾಪತ್ತೆಯಾದ ಇತರರನ್ನು ಐಸಿಸ್‌ಗೆ ತಲುಪಿಸಿದ್ದಾರೆಂಬ ಮಾಹಿತಿಯೂ   ಲಭಿಸಿದೆ ಎಂದು ತನಿಖಾ ತಂಡ ತಿಳಿಸಿದೆ.  ನಾಪತ್ತೆಯಾದವರ ಪೈಕಿ ಕೆಲವರು ಊರಲ್ಲಿರುವ ಅವರ ಮನೆಯವರಿಗೆ ಕಳುಹಿಸಿದ ಸಂದೇಶವನ್ನು ಪರಿಶೀಲಿಸಿದಾಗ ಅವರೆಲ್ಲರೂ ಅಫ್ಘಾನಿಸ್ತಾನದ ಗಡಿಪ್ರದೇಶದಲ್ಲಿರುವುದಾಗಿ ತನಿಖಾ ತಂಡ ದೃಢೀಕರಿಸಿದೆ. ಇವರನ್ನು ಕೇರಳದಿಂದ ಸಾಗಿಸಿದ ಸೂತ್ರಧಾರರು ಖುರೇಶಿ ಮತ್ತು ರಿಸ್ವಾನ್ ಖಾನ್ ಆಗಿರುವುದಾಗಿಯೂ ತನಿಖಾ ತಂಡ ತಿಳಿಸಿದೆ.

ಖುರೇಶಿ ಮತ್ತು ರಿಸ್ವಾನ್ ಖಾನ್‌ರನ್ನು ಪೊಲೀಸರು ಇನ್ನೂ ತೀವ್ರವಾಗಿ ವಿಚಾರಿ ಸುತ್ತಿದ್ದಾರೆ. ಅವರು ತನಿಖೆಯೊಂದಿಗೆ ಸಹಕರಿಸುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY