ಪೊಲೀಸರನ್ನುಕಂಡು ತಪ್ಪಿಸಲೆತ್ನಿಸುವ ವೇಳೆ ಬಿದ್ದು ಗಾಯಗೊಂಡ ಆರೋಪಿ ಬಂಧನ

0
46

ಕಾಸರಗೋಡು: ಪೊಲೀಸರು ದಸ್ತಗಿರಿಗೈಯ್ಯಲು ಹೋದಾಗ ಆರೋಪಿ ಮನೆಯಿಂದ ತಪ್ಪಿಸಿ ಪರಾರಿಯಾಗಲೆತ್ನಿಸುವ ವೇಳೆ ಬಿದ್ದು ಗಾಯಗೊಂಡು ಬಳಿಕ  ಪೊಲೀಸರು ದಸ್ತಗಿರಿಗೈದ ಘಟನೆ ನಿನ್ನೆ ನಡೆದಿದೆ.

 ಚೆಂಗಳ ಬೇರ್ಕ ನಿವಾಸಿ ಸಿದ್ದಿಕ್ (೩೦) ಬಂಧಿತನಾದ ಆರೋಪಿಯಾಗಿದ್ದಾನೆ. ಮೂರು ವಾರಗಳ ಹಿಂದೆ  ಚೆರ್ಕಳದಲ್ಲಿ ರಸ್ತೆ ನವೀಕರಣೆ ನಡೆಸುತ್ತಿದ್ದ ವೇಳೆ ಗುತ್ತಿಗೆದಾರನಿಗೆ ಹಲ್ಲೆನಡೆಸಿ ನಿರ್ಮಾಣ ಕೆಲಸಕ್ಕೆ ಹಾನಿಯುಂಟುಮಾಡಿದ ದೂರಿನಂತೆ ಸಿದ್ದಿಕ್‌ನ ವಿರುದ್ಧ ವಿದ್ಯಾನಗರ ಪೊಲೀಸರು ಸಾರ್ವಜನಿಕ ಸೊತ್ತು ನಾಶಪಡಿಸಿದ ಸೆಕ್ಷನ್ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಲೆಂದು ಹೋದಾಗ ತಪ್ಪಿಸಿ ಪರಾರಿಯಾಗಲೆತ್ನಿಸಿದ ವೇಳೆ ಬಿದ್ದು ಗಾಯಗೊಂಡನು. ಬಳಿಕ ಆತನನ್ನು ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದರು.

NO COMMENTS

LEAVE A REPLY