ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

0
45

ಮಾನ್ಯ: ೧೦ನೇ ತರಗತಿ ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮಾನ್ಯ, ಕಾರ್ಮಾರು ನಿವಾಸಿ ಬಾಬು-ಸರಸ್ವತಿ ದಂಪತಿಯ ಪುತ್ರ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲ್‌ನ ವಿದ್ಯಾರ್ಥಿ ರಕ್ಷಿತ್ (೧೫) ಆತ್ಮಹತ್ಯೆಗೈದ ಬಾಲಕ. ಈತನ ಮೃತದೇಹ ನಿನ್ನೆ ಮಧ್ಯಾಹ್ನ ಮನೆಯೊಳಗೆ ಕಂಡುಬಂದಿದೆ.

ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ರಕ್ಷಿತ್, ಕಲಿಕೆಯಲ್ಲೂ ಮುಂದಿದ್ದನೆಂದು ಅಧ್ಯಾಪಕರು ತಿಳಿಸಿದ್ದಾರೆ. ನಿನ್ನೆ ಈತ ಶಾಲೆಗೆ ಹೋಗಿರಲಿಲ್ಲ. ತಾಯಿ ಕೆಲಸಕ್ಕೆ ಹೋಗಿದ್ದು, ಇತರರು ವಿವಿಧೆಡೆ ಹೋಗಿದ್ದರು. ಈ ಸಂದರ್ಭದಲ್ಲಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತನು ತಂದೆ, ತಾಯಿ, ಸಹೋದರ-ಸಹೋದರಿಯರಾದ ರಮ್ಯಾ, ರಂಜಿತ್ ಎಂಬಿವರನ್ನು ಅಗಲಿದ್ದಾನೆ.

NO COMMENTS

LEAVE A REPLY