ಕೊಲೆಯತ್ನ: ಐದು ಮಂದಿ ವಿರುದ್ಧ ಕೇಸು

0
112

ಕಾಸರಗೋಡು: ಮಧೂರು ಎಸ್.ಪಿ ನಗರದಲ್ಲಿ ವಿದ್ಯಾನಗರ ಚಾಲ ರಸ್ತೆ ಬಳಿಯ ನಿವಾಸಿ ಶಾನವಾಸ್(೨೫) ಎಂಬವರನ್ನು  ತಂಡವೊಂದು ಮಾರಕಾಯುಧಗಳಿಂದ ಅಕ್ರಮಿಸಿ ಕೊಲೆಗೈಯ್ಯಲೆತ್ನಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಆಕ್ರಮಣದಲ್ಲಿ ಗಾಯಗೊಂಡ ಶಾನವಾಸ್‌ರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆ ಬಗ್ಗೆ ಅವರ ಸ್ನೇಹಿತ ಎಸ್.ಪಿ ನಗರದ ಸಿದ್ದಿಕ್ ನೀಡಿದ ದೂರಿನಂತೆ ಮಿರ್ಶಾದ್, ಬದ್ರುದ್ದೀನ್, ಇಕ್ಬಾಲ್ ಸೇರಿದಂತೆ ೫ ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಎಸ್.ಪಿ. ನಗರದಲ್ಲಿರುವ ದೂರುಗಾರ ಸಿದ್ದಿಕ್‌ರ ಮನೆ ಬಳಿ ಶಾನವಾಸ್‌ರನ್ನು ಆಕ್ರಮಿಸಿ ಗಾಯಗೊಳಿಸಲಾಗಿದೆಯೆಂದೂ ಅದರ ಮೊದಲು ಅವರ ವಾಹನವನ್ನೂ ಚೆಟ್ಟಂಗುಯಿಯಲ್ಲಿ ಒಂದು ತಂಡ ಹಾನಿಗೊಳಿಸಿತ್ತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY