ಯುವಕನಿಗೆ ಇರಿತ: ನರಹತ್ಯಾ ಯತ್ನ ಕೇಸು ದಾಖಲು

0
101

ಕಾಸರಗೋಡು: ಮಧೂರಿಗೆ ಸಮೀಪದ ಚೆಟ್ಟಂಗುಯಿ ರಸ್ತೆಯಲ್ಲಿ  ನಡೆದ ಘರ್ಷಣೆಯಲ್ಲಿ ಮಧೂರು ಫತ್ತಾಹ್‌ನಗರ ಬಿಸ್ಮಿಲ್ಲಾ ಮಂಜಿಲ್‌ನ ಇಬ್ರಾಹಿಂ ಬಾದ್‌ಶಾ(೨೬) ಎಂಬವರು ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆ ಬಗ್ಗೆ ಅವರ ಸಹೋದರ ಮಿರ್ಶಾದ್ ನೀಡಿದ ದೂರಿನಂತೆ ಶಾನು ಅಲಿಯಾಸ್ ಶಾನವಾಸ್ ಚಾಲ ಮತ್ತು ಬಿಲಾಲ್ ನಗರದ ಸಾಮ್ ಅಲಿಯಾಸ್ ಸಮದಾನಿ ಎಂಬವರ ವಿರುದ್ಧ ವಿದ್ಯಾನಗರ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ನಿನ್ನೆ ರಾತ್ರಿ ಬಾದ್‌ಶಾ ಚೆಟ್ಟಂಗುಯಿಯ ಮನೆಯೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ  ದಾರಿಮಧ್ಯೆ ಪೂರ್ವದ್ವೇಷದಿಂದ  ಆರೋಪಿಗಳು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಿರ್ಶಾದ್ ಆರೋಪಿಸಿದ್ದಾರೆ.

NO COMMENTS

LEAVE A REPLY