ಅಪರಿಚಿತ ವ್ಯಕ್ತಿ ರೈಲುಗಾಡಿ ಢಿಕ್ಕಿ ಹೊಡೆದು ಮೃತ್ಯು

0
135

ಮಂಜೇಶ್ವರ: ರೈಲು ಗಾಡಿ ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ೮.೧೫ರ ವೇಳೆ ಮಂಜೇಶ್ವರ ರೈಲು ನಿಲ್ದಾಣದ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಮಾರು ೪೫ ವರ್ಷದ ಗಡ್ಡದಾರಿ ವ್ಯಕ್ತಿ ನೀಲಿ ಬಣ್ಣದ ಜೀನ್ಸ್ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ಮಂಗಳೂರಿನಿಂದ ಕಾಸರಗೋಡಿನತ್ತ ಸಾಗುತ್ತಿದ್ದ ರೈಲುಗಾಡಿ ಢಿಕ್ಕಿ ಹೊಡೆದಿರಬೇಕೆನ್ನಲಾಗಿದೆ. ಪೊಲೀಸರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಈ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಮಂಜೇಶ್ವರ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.

NO COMMENTS

LEAVE A REPLY