ಕಾವುಗೋಳಿಯಲ್ಲಿ ವ್ಯಾಪಾರಿಯ ಕಾರಿಗೆ ಆಕ್ರಮಣ

0
103

ಕಾಸರಗೋಡು: ನಗರದ ಕೆಎಸ್‌ಆರ್ ಟಿಸಿ ಕಟ್ಟಡದಲ್ಲಿ ವ್ಯಾಪಾರಿಯಾಗಿರುವ  ಚೇರಂಗೈ ಕಾವುಗೋಳಿ ನಿವಾಸಿ ರಾಜೇಶ್ ಎಂಬವರ ಕಾರನ್ನು ನಿನ್ನೆ ರಾತ್ರಿ ತಂಡವೊಂದು ಆಕ್ರಮಿಸಿ ಹಾನಿಗೈದಿದೆ.    ರಾಜೇಶ್‌ರ ಮನೆ ಬಳಿ ನಿನ್ನೆ ರಾತ್ರಿ ಕಾರನ್ನು ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ನೋಡಿದಾಗ  ಕಾರಿನ ಗಾಜುಗಳನ್ನು  ಹೊಡೆದು ಪುಡಿಗೈದಸ್ಥಿತಿಯಲ್ಲಿ ಪತ್ತೆಯಾಗಿದೆ.  ರಾತ್ರಿ ಸ್ಕೂಟರ್‌ನಲ್ಲಿ ತಲುಪಿದ ತಂಡ ಹೊಡೆದು ನಾಶಗೊಳಿಸಿರುವುದಾಗಿ ದೂರಲಾಗಿದೆ. ರಾತ್ರಿ ೧೧ ಗಂಟೆ ವೇಳೆ ಮೂರು ಮಂದಿಯ ತಂಡ ಸ್ಕೂಟರ್‌ನಲ್ಲಿ ಸ್ಥಳದಿಂದ ಪರಾರಿಯಾಗಿರುವುದನ್ನು ಕಂಡಿರುವುದಾಗಿ ಪರಿಸರ ನಿವಾಸಿಗಳು ತಿಳಿಸಿದ್ದಾರೆನ್ನಲಾಗಿದೆ.   ವಿಷಯ ತಿಳಿದು ಪೊಲೀಸರು ತಲುಪಿ ತಪಾಸಣೆ ನಡೆಸಿದ್ದಾರೆ.

ನಿನ್ನೆ ರಾತ್ರಿ ಚೇರಂಗೈ ಕಾವು ಗೋಳಿ ಕರಾವಳಿ ರಸ್ತೆಯ ಮೂಲಕ ಕಾರಿನಲ್ಲಿ ಮನೆಗೆ ಬರುತ್ತಿದ್ದ ರಾಜೇಶ್‌ರನ್ನು ಸ್ಕೂಟರ್ ರಸ್ತೆಗೆ ಅಡ್ಡ ನಿಲ್ಲಿಸಿ ಮೂರು ಮಂದಿ ತಂಡ  ತಡೆಯೊಡ್ಡಿದೆ. ಕಾರಿನಿಂದ ಇಳಿದು ರಾಜೇಶ್ ಸ್ಕೂಟರ್ ತೆರವುಗೊಳಿ ಸುವಂತೆ ತಿಳಿಸಿದ್ದು ಈವೇಳೆ ತಂಡ ವಾಗ್ವಾದ ನಡೆಸಿರುವುದಾಗಿ ದೂರಲಾಗಿದೆ. ಅನಂತರ ಸ್ಕೂಟರನ್ನು ತಂಡ ತೆರವುಗೊಳಿಸಿದ್ದು ಬಳಿಕ ರಾಜೇಶ್ ಮನೆಗೆ ತಲುಪಿದ್ದರು.   ಈ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಜನರು ಗುಂಪುಕಟ್ಟಿ ನಿಲ್ಲುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಸೃಷ್ಟಿಸುವ ಕೃತ್ಯ ನಿರಂತರ ನಡೆಯುತ್ತಿದೆಯೆಂದು ದೂರಲಾಗಿದೆ.

NO COMMENTS

LEAVE A REPLY