ಗಾಂಜಾ ಸಹಿತ ಓರ್ವ ಸೆರೆ

0
91

ಮಂಜೇಶ್ವರ: ಕಾರಿನಲ್ಲಿ ಸಾಗಿಸು ತ್ತಿದ್ದ ೧೨೦ ಗ್ರಾಂ ಗಾಂಜಾ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಪುಚ್ಚತ್ತಬೈಲು ಎ.ಎಂ.ಹೌಸ್‌ನ ಮೂಸಾರ ಪುತ್ರ ಮೊಯ್ದೀನ್ ಯಾಸಿನ್(೧೯) ಎಂಬಾತನನ್ನು ಸೆರೆ ಹಿಡಿದಿದ್ದು ಈತ ಸಂಚರಿಸುತ್ತಿದ್ದ ಕಾರನ್ನು ಹಾಗೂ ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿ ದ್ದಾರೆ. ನಿನ್ನೆ ರಾತ್ರಿ ೮.೩೦ರ ವೇಳೆ ತಲಪಾಡಿ ಭಾಗದಿಂದ ಹೊಸಂಗಡಿ ಯತ್ತ ಕರ್ನಾಟಕ ನೋಂದಾವಣೆಯ ಕಾರಿನಲ್ಲಿ ತೆರಳುತ್ತಿದ್ದಾಗ ತೂಮಿನಾಡಿ ನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಎಸ್.ಐ ಪಿ. ಪ್ರಮೋದ್ ನೇತೃತ್ವದ ತಂಡ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈತನನ್ನು ಸೆರೆ ಹಿಡಿದು ಗಾಂಜಾ ಹಾಗೂ ಕಾರನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY