ಪಡನ್ನಕ್ಕೆ ಒಯ್ದು ಯಾಸ್ಮಿನ್ಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದ ಪೊಲೀಸರು

0
83

ಕಾಸರಗೋಡು: ಇಸ್ಲಾಮಿಕ್ ಸೇಟ್‌ನೊಂದಿಗೆ ಸಂಪರ್ಕಹೊಂಡಿರುವ ಶಂಕೆಯಂತೆ ಬಂಧಿಸಲ್ಪಟ್ಟ ಬಿಹಾರ ನಿವಾಸಿ ಯಾಸ್ಮಿನ್ ಮೊಹಮ್ಮದ್ ಸಾನೀದ್ (೨೫)ಳನ್ನು ಪೊಲೀಸರು ನಿನ್ನೆ ತೃಕ್ಕರಿಪುರ ಮತ್ತು ಪಡನ್ನಕ್ಕೊಯ್ದು ಮಾಹಿತಿ ಸಂಗ್ರಹಿಸಿದ್ದಾರೆ.

ಕೇರಳದಿಂದ ನಾಪತ್ತೆಯಾದ ೨೧ ಮಂದಿ ಯನ್ನು ಐಸಿಸ್‌ಗೆ ಸೇರ್ಪಡೆಗೊಳಿಸಿರುವ ವ್ಯಕ್ತಿ ಯೆಂದು ಶಂಕಿಸಲಾಗುತ್ತಿರುವ ಪಡನ್ನ ಉಡುಂಬತ್ತಲ ನಿವಾಸಿ ಅಬ್ದುಲ್ ರಾಶೀದ್‌ನೊಂದಿಗೆ ಯಾಸ್ಮಿನ್ ಕಳೆದ ವರ್ಷ ಪಡನ್ನ ಮತ್ತು ತೃಕ್ಕರಿಪುರಕ್ಕೆ ಬಂದು  ವಾಸಿಸಿದ್ದಳು. ಆಕೆ ಅಬ್ದುಲ್ ರಾಶೀದ್‌ನ ಜತೆ ದೇಶಬಿಟ್ಟಿರುವುದಾಗಿ ಹೇಳಲಾಗುತ್ತಿರುವ ಡಾ. ಇಜಾಸ್‌ನ ಮನೆಯಲ್ಲಿ ವಾಸಿಸಿದ್ದಳೆಂದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಆಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಪೊಲೀಸರು ಆಕೆಯನ್ನು ನಿನ್ನೆ ಈ ಎರಡೂ ಪ್ರದೇಶಗಳಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು. ಅಫಘಾನಿಸ್ತಾನಕ್ಕೆ ಹೋಗಲೆಂದು ನಾಲ್ಕು ವರ್ಷದ ಪುತ್ರನೊಂದಿಗೆ ಜುಲೈ ೩೧ರಂದು ದಿಲ್ಲಿ ವಿಮಾನ ನಿಲ್ದಾಣಕ್ಕೆ ಯಾಸ್ಮಿನ್ ತಲುಪಿದ್ದಾಗ  ಆಕೆಯನ್ನು ಪುತ್ರನ ಸಹಿತ ಪೊಲೀಸರು ದಸ್ತಗಿರಿಗೈದಿದ್ದರು.  ಬಳಿಕ ಆಕೆಯ ವಿರುದ್ಧ  ಯುಎಪಿಎ ಕಾನೂನುಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಂಗಬಂಧನಕ್ಕೊಳಗಾದ ಆಕೆಯನ್ನು ಹೆಚ್ಚಿನ ತನಿಖೆಗಾಗಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮೂರುದಿನಗಳ ತನಕ ಹೊಸದುರ್ಗ ಪೊಲೀಸರ ಕಸ್ಟಡಿಗೆ ಬಿಟ್ಟುಕೊಟ್ಟಿತ್ತು. ಬಳಿಕ ಪೊಲೀಸರು ಇಂದು ಬೆಳಿಗ್ಗೆ ಆಕೆಯನ್ನು ಮತ್ತೆ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಆಕೆಯನ್ನು ಮತ್ತು ಕಣ್ಣೂರು ಸೆಂಟ್ರಲ್ ಜೈಲಗೆ ಪೊಲೀಸರು ಸಾಗಿಸಿದರು.ತಮ್ಮ ಮತಾಚಾರ ಪ್ರಕಾರ ಭಾರತದಲ್ಲಿ ಜೀವಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಬೂಲ್‌ಗೆ ಹೋಗ ಬಯಸಿರುವುದಾಗಿ ಯಾಸ್ಮಿನ್ ಪೊಲೀಸರಲ್ಲಿ ತಿಳಿಸಿದ್ದಾಳೆ. ದೇಶಬಿಟ್ಟಿರುವುದಾಗಿ ಹೇಳಲಾ ಗುತ್ತಿರುವ ಅಬ್ದುಲ್ ರಶೀದ್ ತೃಕರಿಪುರ ವಲಯದಿಂದ ನಾಪತ್ತೆಯಾದ ಕೆಲವರಿಗೆ ಮಾತ್ರ ಕಳೆದ ವರ್ಷ ಜಿಹಾದ್‌ನ ಬಗ್ಗೆ   ತರಗತಿ ನಡೆಸಿದ್ದನೆಂದೂ ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆಗ ಯಾಸ್ಮಿನ್ ಕೂಡಾ ತೃಕರಿಪುರದಲ್ಲಿದ್ದಳೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.

NO COMMENTS

LEAVE A REPLY