ಮರಳು ಸಾಗಾಟದ ಓಮ್ನಿ ವ್ಯಾನ್ ವಶ: ಚಾಲಕ ಪರಾರಿ

0
124
Exif_JPEG_420

ಮಂಜೇಶ್ವರ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಓಮ್ನಿ ವ್ಯಾನ್‌ನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದು ಈ ವೇಳೆ ಚಾಲಕ ಪರಾರಿಯಾಗಿದ್ದಾನೆ. ನಿನ್ನೆ ರಾತ್ರಿ ೮.೩೦ ರ ವೇಳೆ ಉಪ್ಪಳ ಬಳಿಯ ಮೂಸೋಡಿಯಿಂದ ಮರಳು ತುಂಬಿದ ಓಮ್ನಿ ವ್ಯಾನ್‌ನ್ನು ಎಸ್.ಐ ಪಿ. ಪ್ರಮೋದ್ ನೇತೃತ್ವದ ತಂಡ ವಶಪಡಿಸಿದೆ. ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ಓಮ್ನಿ ವ್ಯಾನ್ ಚಾಲಕ  ಪೊಲೀಸರನ್ನು ಕಂಡು ವ್ಯಾನ್ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಕೇರಳ ನೋಂದಾವಣೆಯ ಓಮ್ನಿ  ಇದಾಗಿದ್ದು ಹಿಂಬದಿಯ ಸೀಟನ್ನು ತೆರವುಗೊಳಿಸಿ ಗೋಣಿ ಚೀಲದಲ್ಲಿ ತುಂಬಿಸಿ ವ್ಯಾಪಕ ಮರಳು ಸಾಗಾಟ ನಡೆಸಲಾಗುತ್ತಿದ್ದು ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY