ನವಕೇರಳ ಸಭೆಗೆ ದೇಣಿಗೆ ನೀಡಬೇಕೆಂಬ ಸರಕಾರದ ನಿರ್ದೇಶವನ್ನು ತಿರಸ್ಕರಿಸಿದ ವರ್ಕಾಡಿ ಪಂಚಾಯತ್

ವರ್ಕಾಡಿ: ನವಕೇರಳ ಸಭೆಗೆ ದೇಣಿಗೆ ನೀಡಬೇಕೆಂಬ ಸರಕಾರದ ವಿನಂತಿಯನ್ನು ಎಡಪ್ರಜಾಪ್ರ ಭುತ್ವರಂಗದ ಆಡಳಿತೆ ಇರುವ ವರ್ಕಾಡಿ ಪಂಚಾಯತ್ ನಿರಾಕರಿ ಸಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ನಿನ್ನೆ ನಡೆದ ಪಂಚಾಯತ್ ಆಡಳಿತ ಸಮಿತಿ ಅದರ ವಿರುದ್ದ ೧೦ ಮತಗಳ ಅಂತರದಲ್ಲಿ ಸರಕಾರದ ನಿರ್ದೇಶವನ್ನು ತಳ್ಳಿದೆ. ೧೬ ಸದಸ್ಯ ಬಲದ ವರ್ಕಾಡಿ ಪಂ.ನಲ್ಲಿ ಆಡಳಿತ ನಡೆಸುವ ಎಡರಂಗಕ್ಕೆ ಆರು ಸದಸ್ಯರು ಮಾತ್ರವೇ ಇರುವುದು. ಮೂರು ಸಿಪಿಎಂ ಸದಸ್ಯರು,  ಇಬ್ಬರು ಸಿಪಿಐ ಸದಸ್ಯರು, ಓರ್ವ ಎಡರಂಗ ಬೆಂಬಲಿ ತ ಸ್ವತಂತ್ರ ಸೇರಿ ಆರು ಮಂದಿಯಾ ದರೆ ವಿರೋಧ ಪಕ್ಷದಲ್ಲಿ ಬಿಜೆಪಿಯ ಐದು ಸದಸ್ಯರು, ಕಾಂಗ್ರೆಸ್ ಹಾಗೂ ಲೀಗ್‌ನ ತಲಾ ಇಬ್ಬರು, ಎಸ್‌ಡಿಪಿಐ ಯ ಓರ್ವರಿದ್ದಾರೆ.

ನವಕೇರಳ ಸಭೆಗೆ ೫೦,೦೦೦ ರೂ. ನೀಡಬೇಕೆಂದು ಪಂಚಾಯತ್  ಪದಾಧಿಕಾರಿಗಳು ಯತ್ನಿಸಿದ್ದಾರೆನ್ನಲಾ ಗಿದೆ. ಇದನ್ನು ತಿಳಿದ ಬಲಪಕ್ಷಗಳ ಒಕ್ಕೂಟಗಳು ಈ ವಿಷಯದಲ್ಲಿ ಚರ್ಚೆ ನಡೆಸಬೇಕೆಂದು ಅದರ ಬಳಿಕವೇ ತೀರ್ಮಾನ ಕೈಗೊಳ್ಳಬ ಹುದೆಂದು ಸೆಕ್ರೆಟರಿಯವರಲ್ಲಿ ಆಗ್ರಹಿಸಿವೆ. ಅದರ ಆಧಾರದಲ್ಲಿ ನಿನ್ನೆ ನಡೆದ ಸಭಯಲ್ಲಿ ಆಡಳಿತ ಪಕ್ಷದ ವಿರುದ್ಧ ವಿರೋಧಪಕ್ಷದ ೧೦ ಸದಸ್ಯರು ಮತದಾನ ಮಾಡಿದ್ದಾರೆ. ಕಲ್ಯಾಣ ಪಿಂಚಣಿಗಳನ್ನು ವಿತರಿಸಲು ಕೂಡಾ  ಹಣವಿಲ್ಲದಿರುವಾಗ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಲು ಪಂಚಾಯತ್‌ಗೆ ಸಾಧ್ಯವೇ ಎಂದವರು ಪ್ರಶ್ನಿಸಿದರು.

ಕಳೆದ ಪಂಚಾಯತ್ ಚುನಾವಣೆಯ ಬಳಿಕ ಯಾರಿಗೂ ಬಹುಮತ ಲಭಿಸದ ಕಾರಣ ಬಿಜೆಪಿ ಅಧಿಕಾರಕ್ಕೇರುವುದನ್ನು ತಪ್ಪಿಸಲು ಐಕ್ಯರಂಗ ಹಾಗೂ ಎಸ್‌ಡಿಪಿಐ ಅಧ್ಯಕ್ಷರ ಆಯ್ಕೆ ವೇಳೆ ದೂರ ಉಳಿದಿತ್ತು. ಬಿಜೆಪಿ ಕೂಡಾ ಅಧ್ಯಕ್ಷರ ಆಯ್ಕೆಯನ್ನು ಬಹಿಷ್ಕರಿಸಿತ್ತು. ಆಗ ಎಡಪಕ್ಷಗಳು ಮಾತ್ರವೇ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದು ಆಡಳಿತ ಅವರಿಗೆ ಲಭಿಸಿತ್ತು.

Leave a Reply

Your email address will not be published. Required fields are marked *

You cannot copy content of this page