ಬೀದಿ ವ್ಯಾಪಾರ: ಯೂನಿಯನ್ ಮುಖಂಡನ  ಬಣ್ಣ ಬಹಿರಂಗ- ಮರ್ಚೆಂಟ್ಸ್ ಅಸೋಸಿಯೇಶನ್

ಕಾಸರಗೋಡು: ಬೀದಿ ಬದಿ ವ್ಯಾಪಾರ ನಾವು ನಡೆಸುವಾಗ ಕಾನೂನು ವಿಧೇಯ ಹಾಗೂ ಇತರರು ನಡೆಸಿದ ಕಾನೂನು ವಿರುದ್ಧವಾಗಿದೆ ಎಂದು ಕಳವಳ ಪಡುವ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಮುಖಂಡ ಎ. ಅಬ್ದುಲ್ ರಹ್‌ಮಾನ್‌ರ ಹೇಳಿಕೆ ಬೀದಿ ಬದಿ ವ್ಯಾಪಾರ ಮಾಫಿಯಾಗಳನ್ನು ನಿಯಂತ್ರಿಸುವುದು ತಾನೆಂದು ಸುತ್ತುಬಳಸಿ ಹೇಳಿದಂತಾಗಿದೆ ಎಂದು ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎ. ಇಲ್ಯಾಸ್ ನುಡಿದರು. ವ್ಯಾಪಾರಿಗಳು ಹೇಳುತ್ತಿರುವುದು ಸ್ಥಳೀಯರಾದ ಬೀದಿ ಬದಿ ವ್ಯಾಪಾರಿಗಳನ್ನು ಬೇರೆಡೆಯಲ್ಲಿ ವ್ಯಾಪಾರ ನಡೆಸಲು ವ್ಯವಸ್ಥೆ ಮಾಡಬೇಕೆಂದೂ, ಅನ್ಯ ರಾಜ್ಯದ ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸಬೇಕು ಎಂದಾಗಿದೆ.

ನಗರಸಭೆಗಳಿಂದ ಯೂನಿಯನ್‌ನ ಹೆಸರಲ್ಲಿ ಬೆದರಿಸಿ ಅನಧಿಕೃತವಾಗಿ ಸಂಪಾದಿಸಿದ ಟೋಕನ್ ತೋರಿಸಿ ವಶಪಡಿಸಿದ ಸ್ಥಳದಲ್ಲಿ ಅನ್ಯರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ನಿಲ್ಲಿಸಿ ವ್ಯಾಪಾರ ನಡೆಸಿ ತಿಂಗಳಲ್ಲಿ ಲಕ್ಷಾಂತರ ರೂ. ಸಂಪಾದಿಸುವ ಬೀದಿಬದಿ ವ್ಯಾಪಾರ ಮಾಫಿಯವನ್ನು ಸಂರಕ್ಷಿಸುವುದು, ಉಳಿಸುವುದು ತಾನೆಂದು ಯೂನಿಯನ್ ಮುಖಂಡನ ಹೇಳಿಕೆಯಿಂದ ತಿಳಿಯಬಹುದಾಗಿದೆ ಎಂದು ಇಲ್ಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿ ವ್ಯಾಪಾರಿಯ ಉದ್ಯೋಗ, ಆದಾಯವನ್ನು ಪ್ರತಿವರ್ಷ ಆಡಿಟ್ ನಡೆಸಲಾಗುತ್ತಿದೆ. ಅದೇ ವೇಳೆ ಹೇಳಿಕೆ ನೀಡುವವರು ಸೇರಿದಂತೆ ಯೂನಿಯನ್ ಮುಖಂಡರ ಪೂರ್ವಕಾಲವನ್ನು ಮರೆತು ಹೋಗಬಾರದೆಂದು ಕಾಸರಗೋಡು ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಟಿ.ಎ. ಇಲ್ಯಾಸ್ ಹೇಳಿಕೆಯಲ್ಲಿ ನೆನಪಿಸಿದರು.

Leave a Reply

Your email address will not be published. Required fields are marked *

You cannot copy content of this page