ಎರಡೆಡೆ ವಾಹನ ಅಪಘಾತ:  ಮೂವರು ಮಹಿಳೆಯರಿಗೆ ಗಾಯ

ಕಾಸರಗೋಡು: ಎರಡು ಘಟನೆಗಳಲ್ಲಾಗಿ ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದು ಮೂವರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ. ಮೇಲ್ಪರಂಬ ತಲಕ್ಲಲಾಯಿ ಬಳಿ ಸ್ಕೂಟರ್‌ಗಳೆ ರಡು ಪರಸ್ಪರ ಢಿಕ್ಕಿ ಹೊಡೆದು ಆ ಪೈಕಿ ಒಂದು ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ತಲಕ್ಲಲಾಯಿಯ ಶ್ರೀ ನಿಲಯದ ಕುಸುಮ ಕುಮಾರಿ (೪೩) ಮತ್ತು ಪೆರುಂಬಳ ತಂಡನ್ ತೊಟ್ಟಿಯಿಲ್‌ನ ಸಜಿತ (೨೫) ಗಾಯಗೊಂಡಿದ್ದಾರೆ. ಇದೇ ರೀತಿ ಚಳಿಯಂಗೋಡಿನಲ್ಲಿ ಸ್ಕೂಟರ್ ಗಳೆರಡು ಢಿಕ್ಕಿ ಹೊಡೆದು ಸ್ಕೂಟ ರೊಂದರಲ್ಲಿ ಪ್ರಯಾಣಿಸುತ್ತಿದ್ದ ಕಳನಾಡು ಕಟ್ಟಕ್ಕಲ್‌ನ ಕ್ವಾರ್ಟ ರ್ಸ್ ಒಂದರಲ್ಲಿ ವಾಸಿಸುತ್ತಿರುವ  ಆಯಿಷ (೩೯) ಗಾಯಗೊಂಡಿ ದ್ದಾರೆ.  ಗಾಯಾ ಳುಗಳನ್ನು ವಿವಿಧ ಅಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ. ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page