೨೧ ವರ್ಷವಾದರೂ ನಡೆದಾಡಲಾಗದೆ ಸಂಕಷ್ಟ ಅನುಭವಿಸಿದ ಯುವಕ ಮೃತ್ಯು

0
36

ಮುಳ್ಳೇರಿಯ: ಪೂರ್ಣವಾಗಿ ದೈಹಿಕ ಬೆಳವಣಿಗೆಯಿಲ್ಲದೆ ೨೧ ವರ್ಷಗಳಿಂದ ಹಾಸಿಗೆ ಹಿಡಿದು ಸಂಕಷ್ಟ ಜೀವನ ಸಾಗಿಸಿದ ಯುವಕ ಮೃತ್ಯುಗೀಡಾದನು.

ಆದೂರು ಪಳ್ಳ ನಿವಾಸಿ  ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಫರ್ವಾನ್ ಅನಸ್(೨೨) ಮೃತ ದುರ್ದೈವಿಯಾಗಿದ್ದಾನೆ. ಕಾರಡ್ಕ ಪಂಚಾಯತ್‌ನ ೧೦ ನೇ ವಾರ್ಡ್ ಗೊಳಪಟ್ಟ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಈತನ  ಹೆಸರು ದಾಖಲಿಸಲಾಗಿತ್ತು. ಮೊಹಮ್ಮದ್ ಫರ್ವಾನ್ ಅನಸ್ ಜನಿಸುವಾಗಲೇ ಸಹಜ ಬೆಳವಣಿಗೆ ಹೊಂದಬಹುದೆಂದು ಮೊದಲು ವೈದ್ಯರು ತಿಳಿಸಿದ್ದರೆನ್ನಲಾಗಿದೆ. ಆದರೆ ನಡೆದಾಡುವ ಪ್ರಾಯವಾದರೂ ಈತನಿಗೆ ಅದು ಸಾಧ್ಯವಾಗಲಿಲ್ಲ. ಇದರಿಂದ ಚಿಂತೆಗೊಳಗಾದ ತಂದೆ-ತಾಯಿ ಈತನನ್ನು ಮಂಗಳೂರು ಹಾಗೂ ಪರಿಯಾರಂನ ಆಸ್ಪತ್ರೆಗಳಿಗೆ ಕರೆದೊಯ್ದು ದೀರ್ಘಕಾಲ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚಾದು ದಲ್ಲದೆ ಮೊಹಮ್ಮದ್  ಫರ್ವಾನ್ ಅನಸ್‌ನ ಆರೋಗ್ಯ ಸ್ಥಿತಿಯಲ್ಲಿ   ಬೆಳವಣಿಗೆ ಸ್ವಾಭಾವಿಕ ಉಂಟಾಗಲಿಲ್ಲ. ಪುತ್ರ ಇನ್ನೆಂದೂ ನಡೆದಾಡಲು ಅಸಾಧ್ಯವೆಂದು  ವೈದ್ಯರು ತಿಳಿಸಿದ್ದರೂ ಹೆತ್ತವರು  ಮಗನ ಮೇಲೆ ತುಂಬು ನಿರೀಕ್ಷೆಯನ್ನಿರಿಸಿದ್ದರು. ಆದರೆ ಇದುವರೆಗೆ ಸಂಕಷ್ಟ ಜೀವನ ಅನುಭವಿಸಿದ ಮೊಹಮ್ಮದ್  ಫರ್ವಾನ್ ನಿನ್ನೆ ಬೆಳಿಗ್ಗೆ ಕೊನೆಯುಸಿರೆಳೆದನು.

ಮೃತನು ತಂದೆ, ತಾಯಿ ಸುಹರಾ, ಸಹೋದರ-ಸಹೋದರಿಯರಾದ ಅಪ್ಸರ್, ಅಸೀನ್, ಅಶ್ರಫ್, ಲತೀಫ್ ಮೊದಲಾದವರನ್ನು ಅಗಲಿದ್ದಾನೆ.

NO COMMENTS

LEAVE A REPLY