ಬಾಡೂರು ಜಯಂತಿ ಸಾವು ಪ್ರಕರಣ: ಪತಿ ಬಂಧನ

0
181

ಬದಿಯಡ್ಕ: ಬಾಡೂರು ಬಳಿಯ ಚಾಕಟೆಚಾಲ್ ನಿವಾಸಿ ಜಯಂತಿ(೪೦) ಎಂಬವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಪತಿ ಪದ್ಮನಾಭ(೪೩)ನನ್ನು ಕಾಸರಗೋಡು ಡಿವೈಎಸ್ಪಿ ಸುಕುಮಾರನ್ ಬಂಧಿಸಿದ್ದಾರೆ. ಕಳೆದ ಜುಲೈ ೧೦ ರಂದು ಬೆಳಿಗ್ಗೆ ಜಯಂತಿ  ಮನೆಯಿಂದ ನಾಪತ್ತೆಯಾಗಿದ್ದರು. ಹುಡುಕಾಟ ವೇಳೆ ೧೬ರಂದು ಬೆಳಿಗ್ಗೆ ಬಂದ್ಯೋಡು ಬಳಿಯ ಹೇರೂರು ಹೊಳೆಯಲ್ಲಿ ಜಯಂತಿ ಯ ಮೃತದೇಹ ಪತ್ತೆಯಾಗಿತ್ತು. ಇದೇ ವೇಳೆ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜಯಂತಿಯ ತಂದೆ ನಲ್ಕ ಮಂಜಳಗಿರಿಯ ಶಂಕರ ಮೂಲ್ಯರು ಮುಖ್ಯಮಂತ್ರಿ, ಡಿಜಿಪಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಜಯಂತಿಯ ಸಾವಿಗೆ ಕಾರಣ ಪತಿಯ ಹಿಂಸೆಯೇ ಆಗಿದೆಯೆಂದು ಶಂಕರ ಮೂಲ್ಯ ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ  ಇದೀಗ  ತನಿಖೆಯ ಅಂಗವಾಗಿ ಪತಿ ಪದ್ಮನಾಭನನ್ನು ಪೊಲೀಸರು ಬಂಧಿಸಿದ್ದಾರೆ.

NO COMMENTS

LEAVE A REPLY