ನಕಲಿ ಪಾಸ್ಪೋರ್ಟ್: ಗಲ್ಫ್ನಲ್ಲಿ ವ್ಯಾಪಾರಿಯಾಗಿದ್ದ ವ್ಯಕ್ತಿ ಬಂಧನ

0
172

ಕಾಸರಗೋಡು: ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ಇನ್ನೋರ್ವ ನನ್ನು ಪೊಲೀಸರು ಬಂಧಿಸಿದ್ದಾರೆ. ಪನಯಾಲ್ ಪೆರಿಯಾಟಡ್ಕ ಮುನಿಕ್ಕ ಲ್‌ನ ಪಿ.ಎಚ್. ಇಬ್ರಾಹಿಂ (೬೦) ಎಂಬಾತ ಸೆರೆಗೀಡಾದ ವ್ಯಕ್ತಿಯಾಗಿದ್ದಾನೆ. ಈತ ಗಲ್ಫ್‌ನಲ್ಲಿ ವ್ಯಾಪಾರಿಯಾಗಿದ್ದನು.  ಈತನನ್ನು ನಿನ್ನೆ ಅಪರಾಹ್ನ ಕ್ರೈಂಬ್ರಾಂಚ್ ಸಿ.ಐ ಸತೀಶ್ ಕುಮಾರ್ ನೇತೃತ್ವದ ತನಿಖಾ ತಂಡ ಬಂಧಿಸಿದೆ. ರಿಮಾಂಡ್‌ಗೊಳಗಾದ ಆರೋಪಿಯ ಮನೆಯಲ್ಲಿ ಶೋಧ ನಡೆಸಿದಾಗ ಅಸಲಿ ಹಾಗೂ ನಕಲಿ ಸೇರಿ ಎರಡು ಪಾಸ್‌ಪೋರ್ಟ್‌ಗಳು ಪತ್ತೆಯಾಗಿವೆ.

ನಕಲಿ ಪಾಸ್‌ಪೋರ್ಟ್ ಕಂಡತ್ತಿಲ್ ಮೊಹಮ್ಮದ್ ಹಸನ್, ಕೊಳವಯಲ್ ಕಾಞಂಗಾಡ್ ಎಂಬ ವಿಳಾಸದಲ್ಲಿ ಪಡೆಯಲಾಗಿದೆ. ಭಾವಚಿತ್ರ ಸಹಿತ ಭಾವಚಿತ್ರ ಲಭಿಸಲು ನೀಡಿದ ಇತರೆಲ್ಲಾ ದಾಖಲೆಗಳು ನಕಲಿಯೆಂದು ತನಿಖೆಯಲ್ಲಿ ತಿಳಿದುಬಂದಿದೆಯೆಂದು ಸಿ.ಐ ಸತೀಶ್ ಕುಮಾರ್ ತಿಳಿಸಿದ್ದಾರೆ. ಗುರುತುಚೀಟಿ, ಜನನ ಪ್ರಮಾಣಪತ್ರ, ಪಂಚಾಯತ್‌ನಿಂದ ಲಭಿಸಬೇಕಾದ ದಾಖಲೆಗಳನ್ನು  ನಕಲಿಯಾಗಿ ತಯಾರಿ ಸಲಾಗಿದೆಯೆಂದು ತಿಳಿದುಬಂದಿದೆ. ಪಂಚಾಯತ್‌ಗಳ ನಕಲಿ ಮೊಹರು ಕೂಡಾ ಪತ್ತೆಹಚ್ಚಲಾಗಿದೆ.

 ಕಾಞಂಗಾಡ್ ಕೇಂದ್ರೀಕರಿಸಿ ನಕಲಿ ಪಾಸ್‌ಪೋರ್ಟ್ ತಯಾರಿಸಲಾ ಗಿತ್ತು. ಈಸಂಬಂಧ ಹೊಸದುರ್ಗ ಪೊಲೀಸರು ದಾಖಲಿಸಿದ ೨೫೦  ಪ್ರಕರಣಗಳ ಪೈಕಿ  ೩೦ ಪ್ರಕರಣಗಳಲ್ಲಿ ಕಾಸರಗೋಡು ಕ್ರೈಂಬ್ರಾಂಚ್ ತನಿಖೆ ನಡೆಸುತ್ತಿದೆ. ತನಿಖೆಯಂಗವಾಗಿ ನಕಲಿ ಪಾಸ್‌ಪೋರ್ಟ್ ಗಳನ್ನು ಪಡೆದ ೧೩ ಮಂದಿಯ ಭಾವಚಿತ್ರಗಳು ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಈ ಭಾವಚಿತ್ರವನ್ನು ನೋಡಿದವರು ಇಬ್ರಾಹಿಂನ ಕುರಿತು ಕ್ರೈಂಬ್ರಾಂಚ್‌ಗೆ ಮಾಹಿತಿ ನೀಡಿದ್ದಾರೆ.  ಇತರ ಐದು ಮಂದಿಯನ್ನು ಗುರುತುಹಚ್ಚಿ ಅವರ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.   ಮುಳ್ಳೇರಿಯದ ಮೊಹಮ್ಮದ್ ಖಾಸಿಂ, ಕಾಞಂ ಗಾಡ್‌ನ ಬದ್ರುದ್ದೀನ್ ಮತ್ತು ಕಾಞಂಗಾಡ್‌ನ ಆರಂಙಾಡಿಯ ರಫೀಕ್ ಎಂಬವರು  ಗುರುತು ಹಚ್ಚಲ್ಪಟ್ಟ ವರಲ್ಲಿ ಒಳಗೊಂಡಿ ದ್ದಾರೆ.  ಈ ಪೈಕಿ ಮುಳ್ಳೇರಿಯದ ಮೊಹಮ್ಮದ್ ಖಾಸಿಂ ಕಾಞಂ ಗಾಡ್‌ನ ಅಹಮ್ಮದ್ ಎಂಬ ಹೆಸರಲ್ಲಿ ಪಾಸ್‌ಪೋರ್ಟ್ ಸಂಪಾದಿಸಿದ್ದನು. ಅದೇ ರೀತಿ ಬದ್ರುದ್ದೀನ್ ಮತ್ತು ರಫೀಕ್ ಕೂಡಾ ಬೇರೆ ಬೇರೆ ಹೆಸರುಗಳಲ್ಲಿ ಪಾಸ್‌ಪೋರ್ಟ್ ಪಡೆದಿದ್ದರು. ಅದರಲ್ಲಿ ಅವರು ನೀಡಿದ ವಿಳಾಸದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅಂತಹ ವಿಳಾಸವೇ ಇಲ್ಲವೆಂಬುದು ಸ್ಪಷ್ಟಗೊಂಡಿದೆ.

ಎಲ್ಲಾ ಆರೋಪಿಗಳ ಪೂರ್ಣ ಮಾಹಿತಿಯನ್ನು ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಹಸ್ತಾಂ ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

NO COMMENTS

LEAVE A REPLY