ನಿರ್ಭಯ ಅತ್ಯಾಚಾರ ಆರೋಪಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ

0
255

ಹೊಸದಿಲ್ಲಿ: ೨೦೧೨ರಲ್ಲಿ ದೆಹಲಿ ಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲೋರ್ವನಾದ ವಿನಯ್ ಶರ್ಮ ಎಂಬಾತ ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ತಿಹಾರ್ ಜೈಲಿನಲ್ಲಿರುವ ವಿನಯ್ ಶರ್ಮ ನಿನ್ನೆ ರಾತ್ರಿ ಅಮಿತವಾಗಿ ನೋವುನಿವಾರಕ ಮಾತ್ರೆಗಳನ್ನು ಸೇವಿಸಿ, ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿದ್ದಾನೆ.  ನೋವುನಿ ವಾರಕ ಮಾತ್ರೆಗಳನ್ನು ನುಂಗಿ ಕುತ್ತಿಗೆಗೆ ಟವೆಲ್ ಬಿಗಿದುಕೊಂಡು ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ವಿನಯ್‌ಶರ್ಮ ನನ್ನು ಜೈಲಿನ ಅಧಿಕಾರಿಗಳು ದೀನ್ ದಯಾಳ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ಪ್ರಕರಣದಲ್ಲಿ  ಇನ್ನೋರ್ವ ಆರೋಪಿ ರಾಮ್‌ಸಿಂಗ್ ಎಂಬಾತ ೨೦೧೩ರಲ್ಲಿ ಜೈಲಿನಲ್ಲಿ ನೇಣಿಗೆ ಶರಣಾಗಿದ್ದನು. ಈ ಹಿಂದೆ ವಿನಯ್ ಶರ್ಮ ಸಹಖೈದಿಗಳು ಹಲ್ಲೆ ಗೈದಿದ್ದಾರೆಂದು ಆರೋಪಿಸಿ ಹೆಚ್ಚಿನ ಭದ್ರತೆಗೆ ಆಗ್ರಹಿಸಿದ್ದನು. ೨೦೧೨  ಡಿಸೆಂಬರ್ ೧೬ರಂದು ಇಡೀ ದೇಶವನ್ನು ಬೆಚ್ಚಿಬೀಳಿಸುವಂತೆ ಮಾಡಿದ ದೆಹಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಮಂದಿಯನ್ನು ಬಂಧಿಸಲಾಗಿತ್ತು.  ಬಳಿಕ ಅಕ್ಷಯ್ ಟಾಕೂರ್, ವಿನಯ್ ಶರ್ಮ, ಪವನ್ ಗುಪ್ತ, ಮುಖೇಶ್ ಎಂಬಿವರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

NO COMMENTS

LEAVE A REPLY