ಸಮುದ್ರದಲ್ಲಿ ೨ ದೋಣಿಗಳು ಅಪಘಾತಕ್ಕೀಡಾಗಿ ೧೨ ಮಂದಿ ಗಾಯ: ಲಕ್ಷಾಂತರ ರೂ.ಗಳ ನಷ್ಟ

0
203

ಕಾಸರಗೋಡು: ಕೀಯೂರು ಅಳಿವೆಬಾಗಿಲಿನಲ್ಲಿ ಇಂದು ಬೆಳಿಗ್ಗೆ ಎರಡು ದೋಣಿಗಳು ಅಪಘಾತಕ್ಕೀಡಾಗಿ  ೧೨ ಮಂದಿ ಗಾಯಗೊಂಡಿದ್ದಾರೆ. ದೋಣಿಗಳು ವ್ಯಾಪಕ ಹಾನಿಗೊಂಡಿದ್ದು,  ಇಂಜಿನ್, ಬಲೆಗಳು ಪೂರ್ಣವಾಗಿ ನಾಶಗೊಂಡಿದೆ. ಸುಮಾರು ೧೨ ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ.

ಅಪಘಾತದಲ್ಲಿ ಕೀಯೂರು ನಿಲಾಸಿಗಳಾದ ಉಮೇಶನ್ (೩೫), ಅಬ್ದುಲ್ ಖಾದರ್ (೩೧), ರಂಜಿತ್ (೪೩), ವಿಜೇಶ್ (೩೦), ಅಶೋಕನ್ (೩೬), ಲಾಲು (೩೦), ಸಾಯಿಬಾಬು (೪೨), ಚಂದ್ರನ್ (೪೦), ಶಶಿ (೪೦), ಸಾಬಿತ್ (೩೫), ಬಿನು (೩೫), ಕಾಸg ಗೋಡು ಕಸಬ ಕಡಪ್ಪುರದ ಬಾಲನ್ (೪೯) ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶ್ರೀ ಕುರುಂಬಾ ಕಂಪೆನಿಯ ದೋಣಿ ಹಾಗೂ ಯೂಸಫ್ ಎಂಬವರ ಸಕಿಯಾ ಎಂಬ ದೋಣಿಗಳು ಅಪಘಾತಕ್ಕೀಡಾಗಿವೆ. ಕುರುಂಬಾದಲ್ಲಿ ೮ ಮಂದಿ, ಸಕಿಯಾದಲ್ಲಿ ೪ ಮಂದಿಯಿದ್ದರು.  ಇಂದು ಬೆಳಿಗ್ಗೆ ೬.೩೦ಕ್ಕೆ ದೋಣಿಗಳನ್ನು ಸಮುದ್ರಕ್ಕೆ ಇಳಿಸುತ್ತಿದ್ದಂತೆ ಬಲವಾದ ಗಾಳಿಗೆ ಸಿಲುಕಿ ಈ ಎರಡು ದೋಣಿಗಳು ಮಗುಚಿ ಪರಸ್ಪರ ಢಿಕ್ಕಿಹೊಡೆದಿದೆ.

ಕೀಯೂರಿನಲ್ಲಿ ಹೊಸತಾಗಿ ನಿರ್ಮಿಸಿದ ಅಳಿವೆಬಾಗಿಲು ಅಗಲಕಿರಿ ದಾಗಿರುವುದು ಹಾಗೂ ಆಳವಿಲ್ಲದಿರುವುದೇ ಅಪಘಾತಕ್ಕೆ  ಕಾರಣವೆಂದು ಹೇಳಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರು ಸೇರಿ ರಕ್ಷಿಸಿದ್ದಾರೆ. ಇದೇ ವೇಳೆ ವಿಷಯ ತಿಳಿಸಿದರೂ ಕರಾವಳಿ ಪೊಲೀಸರು ತಲುಪಲು ವಿಳಂಬವಾಯಿತೆಂದು ದೂರುಂಟಾಗಿದೆ.

NO COMMENTS

LEAVE A REPLY