ಪೆರ್ಲ-ಸ್ವರ್ಗ-ವಾಣಿನಗರ ರಸ್ತೆಯಲ್ಲಿ ಹೊಂಡಗಳು: ಪ್ರಯಾಣಿಕರಿಗೆ ನರಕಯಾತನೆ

0
241

ಪೆರ್ಲ: ರಸ್ತೆ ಬದಿಯ ಬೃಹತ್ ಹೊಂಡಗಳು ವಾಹನಗಳಿಗೂ ಪಾದಚಾರಿಗಳಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಪೆರ್ಲ-ಸ್ವರ್ಗ ಹಾಗೂ ಸ್ವರ್ಗ-ವಾಣಿನಗರ ರಸ್ತೆಯ ಬದಿಗಳಲ್ಲಿ ಈ ಬೃಹತ್ ಹೊಂಡಗಳಿವೆ. ಇದೀಗ ಮಳೆ ನೀರು ತುಂಬಿಕೊಂಡಿರುವ ಈ ಹೊಂಡಗಳು ರಾತ್ರಿ ವೇಳೆ ಸ್ವರ್ಗದಲ್ಲಿನ ನರಕದ ಹೊಂಡಗಳಾಗಿ ಪರಿಣಮಿಸಿದೆ.

ನೀರಾವರಿ ಪೈಪುಗಳು ಅಳವಡಿಕೆಗಾಗಿ ಈ ಹೊಂಡಗಳನ್ನು ನಿರ್ಮಿಸಲಾಗಿತ್ತು. ಪೈಪುಗಳನ್ನು ಮುಚ್ಚುವ ವೇಳೆ ಕೆಲವು ಕಡೆ ಮುಚ್ಚದೆ ಹಾಗೇ ಇಡಲಾಗಿದೆ. ಈ ಹೊಂಡಗಳೇ ನರಕ ಸದೃಶವಾದುದಾಗಿದೆ. ಪೆರ್ಲ-ಸ್ವರ್ಗ ಮೂಲಕ ಪ್ರತಿದಿನ ಹಲವು ಬಸ್ಸುಗಳು, ಸಂಚಾರ ನಡೆಸುತ್ತಿದೆ. ಅಲ್ಲದೆ ದ್ವಿಚಕ್ರ, ತ್ರಿಚಕ್ರ ಸಹಿತ ನೂರಾರು ವಾಹನಗಳೂ ಈ ದಾರಿಯಾಗಿ ಸಂಚರಿಸುತ್ತಿವೆ. ರಸ್ತೆ ಬದಿಯಲ್ಲಿ ದಾರಿ ದೀಪಗಳ ಕೊರತೆಯೂ, ಅಗಲ ಕಿರಿದಾದ ರಸ್ತೆಯೂ ಮೊದಲೇ ವಾಹನಗಳ ಚಾಲಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಹೊಂಡಗಳೂ ಪ್ರತ್ಯಕ್ಷಗೊಂಡಿರುವುದು  ಅಪಾಯಭೀತಿಯನ್ನು ಇಮ್ಮಡಿಗೊಳಿಸಿದೆ. ಮರಣ ಗುಂಡಿಗಳ ಬಗ್ಗೆ ಸ್ಥಳೀಯ ಚಾಲಕರು ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆಗೆ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

NO COMMENTS

LEAVE A REPLY