ಮಸೀದಿಗೆ ಕಲ್ಲೆಸೆತ: ೫೨ ಮಂದಿ ವಿರುದ್ಧ ಕೇಸು

0
36

ಮಂಜೇಶ್ವರ: ಕಳಿಯೂರು ಗಾಂಧಿನಗರದ ಬದ್ರಿಯಾ ಜುಮಾ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿ ೫೨ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಸೀದಿಯ ಕಾರ್ಯದರ್ಶಿ ಕೆ. ಮೊಹಮ್ಮದ್(೪೮) ನೀಡಿದ ದೂರಿನಂತೆ ಅಬೂಬಕ್ಕರ್ ಧರ್ಮನಗರ, ಹಮೀದ್ ಬೋರ್ಕಳ ಹಾಗೂ ಇತರ ೫೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೨೧ರಂದು ಸಂಜೆ ೬ ಗಂಟೆಗೆ ತಂಡವೊಂದು ಮಸೀದಿಗೆ ಕಲ್ಲೆಸೆದಿರುವುದಾಗಿ ದೂರಲಾಗಿದೆ.

NO COMMENTS

LEAVE A REPLY