ಬದಿಯಡ್ಕ-ಸುಳ್ಯಪದವು ರಸ್ತೆ ಶೋಚನೀಯ: ಕ್ರಿಯಾ ಸಮಿತಿಯಿಂದ ಲೋಕೋಪಯೋಗಿ ಕಚೇರಿ ದಿಗ್ಬಂಧನ

0
31

 ಬದಿಯಡ್ಕ: ಬದಿಯಡ್ಕ-ವಿದ್ಯಾ ಗಿರಿ-ಏತಡ್ಕ-ಕಿನ್ನಿಂಗಾರು-ಸುಳ್ಯ ಪದವು ರಸ್ತೆಯ ಶೋಚನೀಯಾವಸ್ಥೆ ಪರಿಹರಿಸಲು  ಒತ್ತಾಯಿಸಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಲೋಕೋಪ ಯೋಗಿ ಇಲಾಖೆ ಕಚೇರಿಯಲ್ಲಿ ದಿಗ್ಬಂಧನ ಚಳವಳಿ ಆರಂಭಿಸಲಾಗಿದೆ. ಇಂದು ಬೆಳಿಗ್ಗೆ ೮ ಗಂಟೆಗೆ ದಿಗ್ಬಂಧನ ಆರಂಭಗೊಂಡಿದ್ದು  ಸಂಜೆಯವರೆಗೆ ಮುಂದುವರಿಯಲಿದೆ. ಚಳವಳಿಯನ್ನು  ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಉದ್ಘಾಟಿಸಿದರು. ವಿವಿಧ ಪಕ್ಷಗಳ ಮುಖಂಡರಾದ ಎಂ. ನಾರಾಯಣ ಭಟ್, ಬಿ. ರಾಮ ಪಾಟಾಳಿ, ಜೀವನ್ ಥೋಮಸ್, ಬಿ.ಟಿ. ಅಬ್ದುಲ್ಲ, ಎಂ.ಎಚ್. ಜನಾರ್ದನ, ವಿ. ಬಾಲಕೃಷ್ಣ ಶೆಟ್ಟಿ, ಸುಧಾಮ ಗೋಸಾಡ, ಮಾಹಿನ್ ಕೇಳೋಟ್, ಅವಿನಾಶ್ ವಿ.ರೈ ಮೊದಲಾದವರು ನೇತೃತ್ವ ನೀಡಿದರು.

ಕಳೆದ ೧೫ ವರ್ಷಗಳಿಂದ ಈ ಅಂತಾರಾಜ್ಯ ರಸ್ತೆಯಲ್ಲಿ ಯಾವುದೇ ದುರಸ್ತಿ ನಡೆಸಿರಲಿಲ್ಲ. ಇದರಿಂದಾಗಿ ರಸ್ತೆ ಪೂರ್ಣವಾಗಿ ಹಾನಿಗೀಡಾಗಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಇದರಿಂದ ಈ ರಸ್ತೆಯ ಮೂಲಕ ಸಾಗುತ್ತಿದ್ದ ೪ ಬಸ್‌ಗಳು ಯಾನ ಮೊಟಕುಗೊಳಿಸಿದೆ. ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಸಂಕಷ್ಟಕ್ಕೀ ಡಾಗಿದ್ದಾರೆ. ರಸ್ತೆ ದುರಸ್ತಿ ಆಗ್ರಹಿಸಿ ಹಲವು ಹೋರಾಟಗಳು ನಡೆದಿವೆ. ಆದರೆ ಯಾವುದೇ ಕ್ರಮ ಉಂಟಾಗಿಲ್ಲ ವೆಂದು ನಾಗರಿಕರು ದೂರುತ್ತಿದ್ದಾರೆ.

ದಿಗ್ಬಂಧನ ಹಿನ್ನೆಲೆಯಲ್ಲಿ ಬದಿ ಯಡ್ಕ ಲೋಕೋಪಯೋಗಿ ಕಚೇ ರಿಯ ಇಂದಿನ ಕೆಲಸ ಸ್ಥಗಿತಗೊಂಡಿದೆ. ಬದಿಯಡ್ಕ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ.

NO COMMENTS

LEAVE A REPLY