ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಇನ್ನೂ ಐವರು ಆರೋಪಿಗಳಿಗಾಗಿ ಎನ್‌ಐಎ ಶೋಧ

ಸುಳ್ಯ: ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಐದು ಮಂದಿ ಆರೋಪಿಗಳಿಗಾಗಿ ಎನ್‌ಐಎ ಶೋಧ ತೀವ್ರಗೊಳಿಸಿದೆ.

ಬೆಳ್ಳಾರೆಯ ಬೂಡು ನಿವಾಸಿ ಎಂ.ಡಿ. ಮುಸ್ತಫ, ನೆಕ್ಕಿಲಾಡಿ ಅಗ್ನಾಡಿ ನಿವಾಸಿ ಮಸೂದ್ ಕೆ.ಎ, ಬಂಟ್ವಾಳ ತಾಲೂಕು ಕೊಡಾಜೆ ನಿವಾಸಿ ಮೊಹಮ್ಮದ್ ಶರೀಫ್, ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಆರ್. ಉಮ್ಮರ್ ಫಾರೂಕ್, ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದಿಕ್ ಎಂಬಿವರಿಗಾಗಿ ಶೋಧ ನಡೆಯುತ್ತಿದೆ. ೨೦೨೨ ಜುಲೈ ೨೬ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು ಕೊಲೆಗೈದಿತ್ತು. ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ಅಂದು ರಾತ್ರಿ  ಅಂಗಡಿ ಮುಚ್ಚಿ ಮನೆಗೆ ತೆರಳಲು ಸಿದ್ಧನಾಗುತ್ತಿದ್ದಂತೆ ಅಲ್ಲಿಗೆ ಬೈಕ್‌ಗಳಲ್ಲಿ ತಲುಪಿದ ದುಷ್ಕರ್ಮಿಗಳು ಮಾರಕಾ ಯುಧಗಳಿಂದ ಅಕ್ರಮಿಗಳು ಕೊಲೆಗೈದಿದ್ದರು. ಭಾರೀ ಕೋಲಾಹರಕ್ಕೆ ಕಾರಣವಾಗಿದ್ದು ಈ ಘಟನೆ ಬಗ್ಗೆ ಮೊದಲು ಸ್ಥಳೀಯ ಪೊಲೀಸರು ತನಿಖೆ  ನಡೆಸಿದ್ದರು. ಆದರೆ ಬಳಿಕ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಕೊಲೆಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದ ಹಲವು ಮಂದಿಯನ್ನು ಸೆರೆ ಹಿಡಿಯ ಲಾಗಿದೆ. ಕೊಲೆಗೆ ಗೂಢಾಲೋಚನೆ ನಡೆಸಿದವರ  ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ಎನ್‌ಐಎ ಶೋಧ ನಡೆಸುವ ಆರೋಪಿಗಳ ಕುರಿತು ಮಾಹಿತಿ ಲಭ್ಯವಾ ದಲ್ಲಿ ತಿಳಿಸುವಂತೆಯೂ ಎನ್‌ಐಎ ವಿನಂತಿಸಿದೆ.

Leave a Reply

Your email address will not be published. Required fields are marked *

You cannot copy content of this page