ಇಲಿ ಜ್ವರ ಮಧ್ಯವಯಸ್ಕ ನಿಧನ

0
228

ಅಡೂರು: ದೇಲಂಪಾಡಿ ಮಯ್ಯಳ ಕಣ್ಣಂಗೋಳು ಪರಿಶಿಷ್ಟ ಜಾತಿ ಕಾಲನಿ ನಿವಾಸಿ ಚೋಮ (೪೫) ಇಲಿ ಜ್ವರ ಭಾದಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಒಂದು ವಾರದ ಹಿಂದೆ ಜ್ವರ ಕಂಡುಬಂದ ಹಿನ್ನಲೆಯಲ್ಲಿ ಚೋಮರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ನಡೆಸಿದ ತಪಾಸಣೆಯಲ್ಲಿ ಇಲಿ ಜ್ವರವೆಂದು ಖಚಿತಗೊಂಡ ಹಿನ್ನಲೆಯಲ್ಲಿ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡು ಹೋಗಲಾಗಿತ್ತು. ಅಲ್ಲಿ ಅವರು ನಿನ್ನೆ ಮೃತಪಟ್ಟರು. ಮೃತರು ಪತ್ನಿ ಜಾನಕಿ, ಮಕ್ಕಳಾದ ಸುಂದರಿ, ಸುನೀತ, ಸಹೋದರಾದ ಅಂಬಾಡಿ, ಸಂಕ್ರಾತಿ, ಶೀನ, ರಘು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY