ಬಸ್ ಢಿಕ್ಕಿ: ಮಡಿಕೇರಿ ನಿವಾಸಿ ಮಹಿಳೆ ಮೃತ್ಯು

0
211

ಕಾಸರಗೋಡು: ಚೆರ್ಕಳ ಬಸ್ ನಿಲ್ದಾಣದಲ್ಲಿ ನಿನ್ನೆ ಬೆಳಿಗ್ಗೆ ಕೆ.ಎಸ್. ಆರ್.ಟಿ.ಸಿ ಬಸ್ ಢಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಮಡಿಕೇರಿ ನಿವಾಸಿ ಮರಿಯಮ್ಮ(೭೦) ಎಂದು ಗುರುತಿಸ ಲಾಗಿದೆ. ಬೇಕಲದಲ್ಲಿರುವ ಸಹೋದರ ಮನೆಗೆ ಬಂದಿದ್ದ ಮರಿಯಮ್ಮ ಅಲ್ಲಿಂದ ಊರಿಗೆ ಹಿಂತಿರುಗಲೆಂದು ನಿನ್ನೆ ಬೆಳಿಗ್ಗೆ ಚೆರ್ಕಳ ಬಸ್ ನಿಲ್ದಾಣಕ್ಕೆ ಬಂದಿದ್ದ ವೇಳೆ ಅಲ್ಲಿ ಅವರಿಗೆ ಬಸ್ ಢಿಕ್ಕಿ ಹೊಡೆ ದಿದೆ. ಗಂಭೀರ ಗಾಯಗೊಂಡ ಅವರನ್ನು ಮೊದಲು ನಗರದ ಖಾಸಗಿ ಆಸ್ಪತ್ರೆಗೂ, ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾ ಯಿತಾದರೂ ಅದು ಫಲಕಾರಿ ಯಾಗದೆ ರಾತ್ರಿ ಮೃತಪಟ್ಟರು. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.

NO COMMENTS

LEAVE A REPLY