ರಾಜಕೀಯ ಘರ್ಷಣೆ ಬಿಜೆಪಿ ನಿಯೋಗ ಕೇರಳಕ್ಕೆ

0
236

ತಿರುವನಂತಪುರ: ತಿರುವನಂತಪು ರದಲ್ಲಿರುವ ಬಿಜೆಪಿ ರಾಜ್ಯ ಕೇಂದ್ರ ಕಚೇರಿಗೆ ಬಾಂಬೆಸೆತ ಮತ್ತು ಕಣ್ಣೂರು ಸೇರಿದಂತೆ ಬಿಜೆಪಿ ಮತ್ತು ಆರ್‌ಎಸ್‌ಎಸ್  ಕಾರ್ಯಕರ್ತರ ಮೇಲೆ ಪದೇಪದೇ ದಾಳಿ ನಡೆಸುತ್ತಿ ರುವ ಹಿನ್ನೆಲೆಯಲ್ಲಿ ಆಬಗ್ಗೆ ಸಮಗ್ರ ತನಿಖೆ ನಡೆಸಲು ಬಿಜೆಪಿ ಕೇಂದ್ರ ನೇತೃತ್ವ ಬಿಜೆಪಿಯ ಹಲವು ಹಿರಿಯ ನೇತಾರರನ್ನೊಳಗೊಂಡ ನಿಯೋಗ ವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನಿಸಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದರಾ ಗಿರುವ  ಭೂಪೇಂದ್ರ ಯಾದವ್ ನೇತೃತ್ವದ ಸಂಸದರ ತಂಡವನ್ನು ಇದಕ್ಕಾಗಿ ನೇಮಿಸಲಾಗಿದೆ. ಈ ತಂಡದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲಿಚ್ಚಿ, ಅನಂತಕುಮಾರ್ ಹೆಗ್ಡೆ, ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಒಳಗೊಳ್ಳಲಿದ್ದಾರೆ.

ಈ ನಿಯೋಗ ಮೊದಲು ತಿರುವನಂತಪುರಕ್ಕೆ ಆಗಮಿಸಿ ತನಿಖೆ ನಡೆಸಲಿದೆ. ಬಳಿಕ ರಾಜಕೀಯ ಘರ್ಷಣೆ ನಡೆದ ಕಣ್ಣೂರು ಮತ್ತಿತರ ಜಿಲ್ಲೆಗಳಿಗೂ ಸಂದರ್ಶಿಸಿ ತನಿಖೆ ನಡೆಸಿ ಪಕ್ಷದ ಕೇಂದ್ರ ನೇತೃತ್ವಕ್ಕೆ  ವರದಿ ಸಲ್ಲಿಸಲಿದೆ. ಆ ವರದಿಗೆ ಹೊಂದಿಕೊಂಡು ಬಿಜೆಪಿ ಕೇಂದ್ರ ನೇತೃತ್ವ ಮುಂದಿನಕ್ರಮ ಕೈಗೊಳ್ಳಲಿದೆ.

ತಿರುವನಂತಪುರದಲ್ಲಿರುವ ಬಿಜೆಪಿ ರಾಜ್ಯ  ಸಮಿತಿ ಕಚೇರಿಗೆ ನಡೆದ ಬಾಂಬ್ ಆಕ್ರಮಣದ ಬಗ್ಗೆ ಸ್ಪಷ್ಟೀ ಕರಣ ನೀಡುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಕೆಲವು ದಿನಗಳ ಹಿಂದೆಯೇ ನಿರ್ದೇಶ ನೀಡಿತ್ತು.

NO COMMENTS

LEAVE A REPLY