ಅನ್ಯಾಯಯುತ ವರ್ಗಾವಣೆ: ಒತ್ತಡಕ್ಕೆ ಸಿಲುಕಿದ ಗ್ರಾಮಾಧಿಕಾರಿ ನೇಣುಬಿಗಿದು ಆತ್ಮಹತ್ಯೆ

0
274

ಮಂಜೇಶ್ವರ: ವಿಪಕ್ಷ ಸೇವಾ ಸಂ ಘಟನೆಯಲ್ಲಿ  ಸೇರಿ ಕಾರ್ಯವೆಸಗುತ್ತಿ ರುವುದರಿಂದ ಕೊಲ್ಲಂನಿಂದ ಮಂಜೇಶ್ವರದ ಕಡಂಬಾರ್ ಗ್ರಾಮ ಕಚೇರಿಗೆ ವರ್ಗಾ ಯಿಸಲ್ಪಟ್ಟ ಗ್ರಾಮಾಧಿಕಾರಿ ತೀವ್ರ ಮಾನ ಸಿಕ ಒತ್ತಡಕ್ಕೆ ಸಿಲುಕಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.

ಕೊಲ್ಲಂ ಕಿಳಿಕೊಲ್ಲೂರು ಸಮೀಪದ  ಮೂನಾಂಕುಟ್ಟಿ ಸನಾ ಆಡಿಟೋರಿಯಂ ಬಳಿಯ ನಿವಾಸಿ ಪೋಲ್ ಥೋಮಸ್ (೫೪)  ಆತ್ಮಹತ್ಯೆಗೈದ ಗ್ರಾಮಾಧಿಕಾರಿ ಯಾಗಿದ್ದಾರೆ. ಕಾಂಗ್ರೆಸ್ ಅನುಕೂಲ ಸರಕಾರಿ ಸಂಘಟನೆಯಾದ ಎನ್‌ಜಿಒ ಅಸೋಸಿಯೇಶನ್‌ನ ಸಕ್ರಿಯ ಕಾರ್ಯ ಕರ್ತನಾಗಿರುವ ಪೋಲ್ ಥೋಮಸ್ ಈಹಿಂದೆ ಕೊಲ್ಲಂ ಕಲೆಕ್ಟರೇಟ್‌ನ ಅಕೌಂಟ್ ಸೆಕ್ಷನ್‌ನ ಸೀನಿಯರ್ ಕ್ಲಾರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಗ ಅವರು ಎನ್‌ಜಿ ಅಸೋಸಿಯೇಶನ್ ಕೊಲ್ಲಂ ಜಿಲ್ಲಾ ಕೌನ್ಸಿಲ್ ಸದಸ್ಯರಾಗಿದ್ದರು. ಬಳಿಕ ಅವರಿಗೆ ಉದ್ಯೋಗದಲ್ಲಿ ಭಡ್ತಿ ಲಭಿಸಿ  ಕಳೆದ ಅಗೋಸ್ತ್ ತಿಂಗಳಲ್ಲಿ ಮಂಜೇಶ್ವರಕ್ಕೆ ಸಮೀಪದ ಕಡಂಬಾರ್ ಗ್ರಾಮ ಕಚೇರಿಗೆ ವರ್ಗಾಯಿಸಿ ಅಲ್ಲಿನ ಗ್ರಾಮಾಧಿಕಾರಿಯಾಗಿ ಸರಕಾರ ನೇಮಿಸಿತ್ತು. ಕಾಸರಗೋಡು ಜಿಲ್ಲೆಗೆ ವರ್ಗಾವಣೆಗೊಂಡಿರುವುದರಿಂದ ಪೋಲ್ ಥೋಮಸ್ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿತ್ತು.  ಹಲವು ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದಿದ್ದರೆಂದು ಅವರ ಮನೆಯವರು ತಿಳಿಸಿದ್ದಾರೆ. ಉದ್ಯೋಗ ದಲ್ಲಿ ಭಡ್ತಿ ಲಭಿಸಿದ ಹಿನ್ನೆಲೆಯಲ್ಲಿ ತೃಶೂರಿಗೆ ವರ್ಗಾಯಿಸಬಹುದೆಂಬ ನಿರೀಕ್ಷೆಯನ್ನು ಪೋಲ್ ಥೋಮಸ್ ವ್ಯಕ್ತಪಡಿಸಿದ್ದರು. ಆದರೆ ಅದು ನಡೆಯಲಿಲ್ಲ. ಕಾಸರಗೋಡಿನಿಂದ ದಕ್ಷಿಣ ಕೇರಳದ ಜಿಲ್ಲೆಗೆ ವರ್ಗಾಯಿಸ ಬೇಕೆಂದು ಅವರು ರಾಜ್ಯ ಭೂಕಂದಾಯ ಆಯುಕ್ತರಿಗೂ ಮನವಿ ಸಲ್ಲಿಸಿದ್ದರು. ಅದರಿಂದ ಯಾವುದೇ ಪ್ರಯೋಜನವುಂ ಟಾಗಲಿಲ್ಲ. ಉದ್ಯೋಗದಲ್ಲಿ  ಭಡ್ತಿ ಲಭಿ ಸಿದ ಹಿನ್ನೆಲೆಯಲ್ಲಿ ಅವರು ಅಗೋಸ್ತ್ ೮ರಂದು ಕೊಲ್ಲಂ ಕಲೆಕ್ಟರೇಟ್  ಕೆಲಸದಿಂದ ಬಿಡುಗಡೆಗೊಂಡು ಒಂದು ವಾರದ ರಜೆ ಬಳಿಕ ಕಡಂಬಾರು ಗ್ರಾಮಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡಿದ್ದರು.   ಅವರು  ಕಾಸರಗೋಡು  ಅಣಂಗೂರಿನಲ್ಲಿರುವ ಸರಕಾರಿ ಸಿಬ್ಬಂದಿ ಗಳು ವಾಸಿಸುತ್ತಿರುವ ವಸತಿಗೃಹದಲ್ಲಿ  ವಾಸಿಸತೊಡಗಿದ್ದರು. ಅಲ್ಲಿಂದ ದೈನಂದಿನ ೩೦ ಕಿ.ಮೀ ದೂರದ ಕಡಂಬಾರ್ ಗ್ರಾಮ ಕಚೇರಿಗೆ  ಹೋಗುತ್ತಿದ್ದರು. ಕೆಲಸಕ್ಕಾಗಿ ದೈನಂದಿನ ೬೦ ಕಿ.ಮೀ. ಪ್ರಯಾಣಿಸು ವುದು ಮತ್ತು ಆಹಾರ ಸಮಸ್ಯೆ ತನ್ನನ್ನು ತೀವ್ರ ಆರೋಗ್ಯ ಸಮಸ್ಯೆಯಲ್ಲಿ  ಸಿಲುಕಿಸುವಂತೆ ಮಾಡಿದೆಯೆಂದು ಅವರು  ಊರವರಲ್ಲಿ ಹಾಗೂ ಮನೆಯವರಲ್ಲಿ ತಿಳಿಸಿದ್ದರೆನ್ನ ಲಾಗಿದೆ.  ಅವರ ಲಾಸ್ಟ್ ಪೈ ಸರ್ಟಿಫಿ ಕೆಟ್ (ಎಲ್.ಪಿ.ಸಿ) ಕೈಸೇರದ ಕಾರಣ ಅಗೋಸ್ತು ತಿಂಗಳ ವೇತನವನ್ನು ಅವರಿಗೆ  ಪಡೆಯಲು ಸಾಧ್ಯವಾಗಲಿಲ್ಲ. ಅದು ಅವರನ್ನು ಇನ್ನಷ್ಟು ಅಸ್ಪಸ್ಥರನ್ನಾಗಿಸಿತು. ಇದರಿಂದ ಮನನೊಂದು   ಸೆ. ೪ರಂದು ತನ್ನ ಕೊಲ್ಲಂನಲ್ಲಿರುವ ಸ್ವಂತ ಮನೆಗೆ ಹೋಗಿ  ನಿನ್ನೆ ಬೆಳಿಗ್ಗೆ ತೆಂಗಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ತಂದೆ ಪಿ.ಸಿ. ಥೋಮಸ್, ತಾಯಿ ಲಿಲ್ಲಿ ಥೋಮಸ್, ಪತ್ನಿ ಜೆಸ್ಸಿ, ಮಕ್ಕಳಾದ ಆನ್‌ಪೋಲ್, ಸಾರಾ ಪೋಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY