ಮಹಿಳೆಯ ಕೊಲೆಗೈದು ಪಂಪ್ಶೆಡ್ನಲ್ಲಿ ಉಪೇಕ್ಷೆ ಆರೋಪಿಗಾಗಿ ಲುಕ್ಔಟ್ ನೋಟೀಸ್ ಪ್ರಕಟ

0
43

ಕಾಸರಗೋಡು: ೨೦೦೭ರಲ್ಲಿ ನಡೆದ ಮಹಿಳೆಯೋರ್ವೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತ್ತೆಗಾಗಿ ಪೊಲೀಸರು  ಇದೀಗ ಮತ್ತೆ ತೀವ್ರ ಕಾರ್ಯಾಚರಣೆ ಆರಂಭಿಸಿ ದ್ದಾರೆ. ತನಿಖೆಯ ಅಂಗವಾಗಿ ಆರೋ ಪಿಯ ಲುಕ್ ಔಟ್ ನೋಟೀಸು ಪ್ರಕಟಿಸಿದ್ದು ವಿವಿಧೆಡೆ ಪ್ರದರ್ಶಿ ಸಲಾಗಿದೆ.

ಚೆಟ್ಟುಂಗುಳಿ ನಿವಾಸಿ ಕೃಷ್ಣನ್ ಎಂಬವರ ಪುತ್ರ ದಾಮೋದರನ್ ಯಾನೆ ದಾಮು (೫೦) ಎಂಬಾತ ಕೊ ಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಚೆರ್ಕಳ ಬಳಿಯ ಕೋಲಾಚಿ ಯಡ್ಕ ನಿವಾಸಿ ಜಾನಕಿ (೪೦) ಎಂಬಾಕೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಾಮೋz ರನ್ ಯಾನೆ ದಾಮುವಿನ  ಪತ್ತೆಗಾಗಿ ಪೊಲೀಸರು ಶೋಧ ತೀವ್ರಗೊ ಳಿಸಿದ್ದಾರೆ.

೨೦೦೭ ಜನವರಿ ೨೮ ಹಾಗೂ ೨೯ರ ಮಧ್ಯೆ ಜಾನಕಿಯ ಕೊಲೆ ನಡೆದಿದೆ. ಜಾನಕಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ಗೆ ಕೆಲಸಕ್ಕೆ ಬಂದ ಆರೋಪಿ ದಾಮೋದರನ್ ಬಳಿಕ ಜಾನಕಿಯನ್ನು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಚೆರ್ಕಳ ಬಳಿಯ ಗೋಳಿಕಟ್ಟೆ ಎಂಬಲ್ಲಿನ  ವ್ಯಕ್ತಿಯೊಬ್ಬರ ಮೋಟಾರ್ ಶೆಡ್‌ನಲ್ಲಿ ೨೦೦೭ ಜ ವರಿ ೨೯ರಂದು ಜಾನಕಿಯ ಮೃತ ದೇಹ ಪತ್ತೆಯಾಗಿದೆ. ಅಂದು ಪೊಲೀ ಸರು ನಡೆಸಿದ ಪ್ರಾಥಮಿಕ ತನಿಖೆ ಯಲ್ಲಿ ಇದು ಕೊಲೆಕೃತ್ಯವೆಂದು ಸಾಬೀತುಗೊಂಡಿತ್ತು. ಈಕೊಲೆ ಕೃತ್ಯ ದಾಮೋದರನ್ ಯಾನೆ ದಾಮು ನಡೆಸಿರುವುದಾಗಿ ಪೊಲೀಸರು ದೃಢೀಕರಿಸಿ ಆತನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದರು.  ಆದರೆ ಕೃತ್ಯದ ಬಳಿಕ ತಲೆಮರೆಸಿಕೊಂಡ ಆರೋಪಿಯನ್ನು ಇದುವರೆಗೆ ಪತ್ತೆಹ ಚ್ಚಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ತನಿಖೆ ಪುನರಾರಂಭಿಸಿದ್ದು, ಇದರಂತೆ ಆರೋಪಿಯ ಭಾವಚಿತ್ರ ಒಳಗೊಂಡ ಲುಕ್‌ಔಟ್ ನೋಟೀ ಸುಗಳನ್ನು ರೈಲು ನಿಲ್ದಾಣ, ಬಸ್ ನಿಲ್ದಾಣ ಸಹಿತ ಜನಸಂದಣಿಯುಳ್ಳ ಪ್ರದೇಶಗಳಲ್ಲಿ ಪ್ರದರ್ಶಿಸಿದ್ದಾರೆ.

NO COMMENTS

LEAVE A REPLY