ಬದಿಯಡ್ಕ ವ್ಯಾಪಾರಿ ನಿಧನ

0
51

ಬದಿಯಡ್ಕ: ಇಲ್ಲಿನ ಮೇಲಿನ ಪೇಟೆಯ ಶ್ರೀಕೃಷ್ಣ ಭವನ ಕಟ್ಟಡದಲ್ಲಿರುವ ಮಧುರ ಸ್ವೀಟ್ಸ್ ಮಾಲಕ ಅಶೋಕ ಭಟ್ ಯಾನೆ ನಾರಾಯಣ ಭಟ್ (೪೮) ಇಂದು ಬೆಳಿಗ್ಗೆ ಚೇರ್ಕೂಡ್ಲುವಿನ ಸ್ವ-ಗೃಹದಲ್ಲಿ ಹೃದಯಾಘಾತದಿಂದ ನಿಧನಹೊಂದಿ ದರು. ಇವರು ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆಯಲ್ಲಿದ್ದರು.

ವೆಂಕಟ್ರಮಣ ಭಟ್-ಮನೋ ರಮಾ ಭಟ್ ದಂಪತಿಯ ಪುತ್ರನಾದ ಮೃತರು ಪತ್ನಿ ಪ್ರೇಮಲತಾ, ಮಕ್ಕಳಾದ ದೇವಪರೀಕ್ಷಿತ್, ಅಶ್ವತ್‌ರಮಣ, ಸಹೋದರ ರಾಜಗೋಪಾಲ್, ಸಹೋದರಿ ಶಾಂತಾಕುಮಾರಿ ಮೊದಲಾದವರನ್ನು ಅಗಲಿದ್ದಾರೆ.

ನಾರಾಯಣ ಭಟ್‌ರ ನಿಧನಕ್ಕೆ ಸಂತಾಪ ಸೂಚಿಸಿ ಬೆಳಿಗ್ಗೆ ೧೦ ಗಂಟೆ ವರೆಗೆ ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಗಳು ಹರತಾಳ ಆಚರಿಸಿದರು.

NO COMMENTS

LEAVE A REPLY