ವಿವಿಧೆಡೆ ದಾಳಿ: ೩ ಕಿಲೋ ಗಾಂಜಾ, ಬೃಹತ್  ವಾಶ್, ತಂಬಾಕು ಉತ್ಪನ್ನ ವಶ; ಓರ್ವ ಸೆರೆ

ಕಾಸರಗೋಡು: ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ವೇಳೆ ಜಿಲ್ಲೆಗೆ ಹೊರಗಿನಿಂದ ಭಾರೀ ಪ್ರಮಾಣದಲ್ಲಿ ಅಮಲು ಪದಾರ್ಥ, ಮದ್ಯ ಇತ್ಯಾದಿ ಗಳು ಹರಿದುಬರುತ್ತಿದ್ದು, ಅದನ್ನು ತಡೆ ಗಟ್ಟಿ ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಅಬಕಾರಿ ತಂಡ ಇನ್ನಷ್ಟು ತೀವ್ರಗೊಳಿ ಸಿದೆ.  ಇದರಂತೆ ನಿನ್ನೆ ಜಿಲ್ಲೆಯ ವಿವಿಧೆಡೆ ಗಳಲ್ಲಾಗಿ ಅಬಕಾರಿ ತಂಡ  ನಡೆಸಿದ ಕಾರ್ಯಾಚರಣೆಗಳಲ್ಲಾಗಿ ಮೂರು ಕಿಲೋ ದಷ್ಟು ಗಾಂಜಾ,  ಕಳ್ಳಭಟ್ಟಿ ಸಾರಾಯಿಗಾಗಿ ತಯಾರಿಸುವ ೧೬೫ ಲೀಟರ್ ವಾಶ್ (ಹುಳಿರಸ)ವನ್ನು ಮತ್ತು ೪೦ ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಉಪ್ಪಳ ರೈಲು ನಿಲ್ದಾಣ ರಸ್ತೆ ಬಳಿಯ ಝೈನಬಾ ಅಪಾರ್ಟ್‌ಮೆಂ ಟ್‌ನಲ್ಲಿ ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್  ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಅಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ೨.೭೫ ಕಿಲೋ ಗಾಂಜಾ ಪತ್ತೆಹಚ್ಚಲಾ ಗಿದೆ. ಮಾತ್ರವಲ್ಲದೆ ಇದೇ ಅಪಾರ್ಟ್‌ಮೆಂಟ್ ಹೊರಗಡೆ  ಗೋಣಿ ಚೀಲದಲ್ಲಿ ತುಂಬಿಸಿಡಲಾಗಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ೪೦ ಕಿಲೋ ತಂಬಾಕು ಉತ್ಪನ್ನಗಳನ್ನೂ ಅಬಕಾರಿ ತಂಡ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ಈ ಅಪಾರ್ಟ್‌ಮೆಂ ಟ್‌ನಲ್ಲಿ ವಾಸಿಸುತ್ತಿರುವ ಸೈಯದ್ ಮುಹಮ್ಮದ್ ಅರ್ಷಾದ್ (೪೯) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಐ.ಬಿ. ಪ್ರಿವೆಂಟೀವ್ ಆಫೀಸರ್  ಶ್ರೀನಿವಾಸನ್ ಪತ್ತಿಲ್, ರಮೇಶನ್ ಆರ್ (ಗ್ರೇಡ್ ಪ್ರಿವೆಂಟೀವ್ ಆಫೀ ಸರ್), ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಹಮೀದ್ ಎಂ, ಅಭಿಲಾಷ್ ಎಂ.ಎಂ, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಇಂದಿರಾ ಕೆ, ಲಿಮ ಪಿ.ಕೆ ಮತ್ತು ಚಾಲಕ ಪ್ರವೀಣ್ ಕುಮಾರ್ ಎಂಬಿವರು ಒಳಗೊಂಡಿದ್ದರು.

ಇದೇ ರೀತಿ ಹೊಸದುರ್ಗ ತಾಲೂಕಿನ ಪಡನ್ನ ಒರಿಮುಖ್ ಎಂಬಲ್ಲಿ ಹೊಸದರ್ಗ ಅಬಕಾರಿ ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸುಧೀರ್ ಕೆ.ಕೆ. ನೇತೃತ್ವದ ಅಬಕಾರಿತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೧.೦೯೬ ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ತುರ್ತಿ ಗ್ರಾಮದ ಕಾಡಂಗೊಂಡಿನ ಕುಂಞಾಲಿ (೨೯) ಎಂಬಾತನ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ಇದರ ಹೊರತಾಗಿ ವೆಳ್ಳರಿಕುಂಡ್ ಪರಪ್ಪ ಪಳ್ಳಿಕುಳಂನಲ್ಲಿ  ಶೀಟ್‌ನಿಂದ ನಿರ್ಮಿಸಲಾಗಿದ್ದ ಮನೆಯೊಂದಕ್ಕೆ ನೀಲೇಶ್ವರ ಅಬಕಾರಿ ರೇಂಜ್ ಪ್ರಿವೆಂಟೀವ್ ಆಫೀಸರ್ ಅನೀಶ್ ಕೆ.ಯು ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆಗಾಗಿ ಸಿದ್ಧಪಡಿಸಿದ್ದ ೧೧೦ ಲೀಟರ್ ವಾಶ್ (ಹುಳಿರಸ) ಪತ್ತೆಹಚ್ಚಲಾಗಿದೆ. ಇದನ್ನು ಪ್ಲಾಸ್ಟಿಕ್ ಬಕೆಟ್‌ಗಳಲ್ಲಾಗಿ ತುಂಬಿಸಿಡಲಾಗಿತ್ತು. ಆದರೆ ಆ ವೇಳೆ ಅದನ್ನು ಬಚ್ಚಿಟ್ಟಿದ್ದವರು ತಪ್ಪಿಸಿಕೊಂಡಿದ್ದರು.  ನೀಲೇಶ್ವರ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಸತೀಶನ್ ನಾಲುಪುರಕಲ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ಚೀಮೇನಿ ಆಯುರ್ವೇದ ಆಸ್ಪತ್ರೆ ಸಮೀಪ ನಿರ್ಜನ ಪ್ರದೇಶದಲ್ಲಿ  ನಡೆಸಿದ ಕಾರ್ಯಾ ಚರಣೆಯಲ್ಲಿ ಅಲ್ಲಿ ಬಚ್ಚಿಡಲಾಗಿದ್ದ ೬೫ ಲೀಟರ್ ವಾಶ್‌ನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page