ಪತ್ನಿಗೆ ಇರಿದು, ಮಕ್ಕಳಿಗೆ ವಿಷ ಉಣಿಸಿ ಕೊಲೆಗೈಯ್ಯಲೆತ್ನಿಸಿದ ಆರೋಪಿ ಬಂಧನ

0
53

ಕಾಸರಗೋಡು: ಪತ್ನಿಗೆ  ಇರಿದು ಗಾಯಗೊಳಿಸಿದ ಬಳಿಕ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಲೆಗೈಯ್ಯಲೆತ್ನಿಸಿದ ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೈಯ್ಯಲೆತ್ನಿಸಿದ  ಪ್ರಕರಣದ ಆರೋಪಿಯನ್ನು ವಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ.

ವೆಳ್ಳರಿಕುಂಡು ಚುಳ್ಳಿ ನಿವಾಸಿ ಶಾಜು ಕೆ. ಜೋಯ್ (೩೯) ಬಂಧಿತ ಆರೋಪಿಯಾಗಿದ್ದಾನೆ. ಸೆ. ೧೩ರಂದು ಆರೋಪಿ ಪತ್ನಿಯೊಂದಿಗೆ ಜಗಳವಾಡಿ ಆಕೆಗೆ ಇರಿದು ಗಂಭೀರಗಾಯಗೊಳಿಸಿದ್ದನು. ಬಳಿಕ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ  ವಿಷವುಣಿಸಿ  ಕೊಲೆಗೈಯ್ಯಲೆತ್ನಿಸಿದ ಬಳಿಕ ಸ್ವಯಂ ಆಗಿ ವಿಷಸೇವಿಸಿ ಆತ್ಮಹತ್ಯೆಗೈಯ್ಯಲೆತ್ನಿಸಿದ್ದನು. ಬಳಿಕ ಈ ನಾಲ್ವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಆರೋಪಿ ಶಾಜು ಕೆ. ಜೋಯ್, ಪತ್ನಿ ಮತ್ತು ಮಕ್ಕಳು ಪ್ರಾಣಾಪಾಯದಿಂದ  ಪಾರಾಗಿದ್ದಾರೆ. ಆತ್ಮಹತ್ಯೆಗೆತ್ನಿಸಿದ ಶಾಜು ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಮತ್ತು ಮಕ್ಕಳನ್ನು ಕೊಲೆಗೈಯ್ಯಲೆತ್ನಿಸಿದ ಆರೋಪದಂತೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY