ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಯ್ಗೆ ಸಾಗಾಟ ವ್ಯಾಪಕ: ೬ ಟೋರಸ್ ಲಾರಿ ವಶ

0
38

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಮೂಲಕ ಹೊಯ್ಗೆ ಸಾಗಾಟ ವ್ಯಾಪಕಗೊಂಡಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ಆರು ಟೋರಸ್ ಲಾರಿಗಳಲ್ಲಿ ಸಾಗಿಸುತ್ತಿದ್ದ ಹೊಯ್ಗೆ ವಶಪಡಿಸಲಾಗಿದೆ. ಕುಂಬಳೆ ಸಿ.ಐ ವಿ.ವಿ. ಮನೋಜ್‌ರ ನೇತೃತ್ವದಲ್ಲಿ ಆರಿಕ್ಕಾಡಿಯಲ್ಲಿ ನಡೆಸಿದ ತಪಾಸಣೆ ವೇಳೆ  ನಾಲ್ಕು ಲಾರಿಗಳನ್ನು ವಶಪಡಿಸಲಾಗಿದೆ. ಚಾಲಕರನ್ನು ಕಸ್ಟಡಿಗೆ ತೆಗೆಯಲಾಗಿದೆ. ಮಂಜೇಶ್ವರದಲ್ಲಿ ಎಸ್.ಐ ಸಿ. ಪ್ರಮೋದ್ ನೇತೃತ್ವದಲ್ಲಿ ನಡೆಸಿದ ತಪಾಸಣೆಯಲ್ಲಿ ಎರಡು ಲಾರಿಗಳನ್ನು ವಶಪಡಿಸಲಾಗಿದೆ. ಅಲ್ಪಕಾಲದಿಂದ ಕಡಿಮೆಯಾಗಿದ್ದ ಹೊಯ್ಗೆ ಸಾಗಾಟ ಇದೀಗ ಮತ್ತೆ ವ್ಯಾಪಕಗೊಂಡಿದೆ ಯೆಂದು ಪೊಲೀಸರು ತಿಳಿಸುತ್ತಿದ್ದಾರೆ.

ಕರ್ನಾಟಕದಿಂದ ಕಾನೂನುಪ್ರಕಾರ ಹೊಯ್ಗೆ ತರುವುದರಲ್ಲಿ ಅಡ್ಡಿಯಿಲ್ಲ. ಆದರೆ ಅದರ ಮರೆಯಲ್ಲಿ ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಸಲಾಗುತ್ತಿದೆ. ಅನಧಿಕೃತವಾಗಿ ಸಾಗಿಸುವ ಹೊಯ್ಗೆ ವಶಪಡಿಸಿ ೨೫,೦೦೦ ರೂ. ದಂಡ ವಸೂಲಿಮಾಡಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಇದೀಗ ವಶಪಡಿಸಿದ ಲಾರಿಗಳ ಮಾಲಕರು ಹೈಕೋರ್ಟ್‌ಗೆ ಸಮೀಪಿಸಿ ಅನುಕೂಲ ತೀರ್ಪು ಪಡೆಯುತ್ತಿದ್ದಾರೆಂದು ಪೊಲೀಸರು ತಿಳಿಸುತ್ತಿದ್ದಾರೆ.

NO COMMENTS

LEAVE A REPLY