ಉಳಿಯತ್ತಡ್ಕದಲ್ಲಿ ಗೂಡಂಗಡಿಗೆ ಬೆಂಕಿ

0
116

ಕಾಸರಗೋಡು: ರಾತ್ರಿಮರೆಯಲ್ಲಿ ಅಕ್ರಮಿಗಳು ಗೂಡಂಗಡಿಗೆ ಕಿಚ್ಚಿರಿಸಿ ನಾಶಗೊಳಿಸಿದ ಘಟನೆ ಉಳಿಯತ್ತಡ್ಕದಲ್ಲಿ ನಡೆದಿದೆ. ಉಳಿಯತ್ತಡ್ಕ ನಿವಾಸಿ ಸಲಾವುದ್ದೀನ್ ಎಂಬವರು ಉಳಿಯತ್ತಡ್ಕ ಜೈಮಾತಾ ಶಾಲೆ ಸಮೀಪ ರಸ್ತೆ ಬದಿ ನಡೆಸುತ್ತಿದ್ದ ಗೂಡಂಗಡಿಗೆ ನಿನ್ನೆ ರಾತ್ರಿ ಕಿಚ್ಚಿರಿಸಲಾಗಿದೆ.   ಗೂಡಂಗಡಿ ಹಾಗೂ ಒಳಗಿರಿಸಲಾಗಿದ್ದ ಸಾಮಗ್ರಿಗಳೆಲ್ಲಾ ಸುಟ್ಟು ಭಸ್ಮಗೊಂಡಿದೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಈ ಘಟನೆ ನಡೆದಿದೆ. ಕಾಸರಗೋಡು ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ. ಬೆಂಕಿ ಅನಾಹುತದಿಂದ ೨ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY